varthabharthi

ರಾಷ್ಟ್ರೀಯ

ಜಾರ್ಖಂಡ್ ನಲ್ಲಿ ಎನೌಕೌಂಟರ್: ಮೂವರು ನಕ್ಸಲರ ಸಾವು, ಓರ್ವ ಸಿಆರ್ ಪಿಎಫ್ ಯೋಧ ಹುತಾತ್ಮ

ವಾರ್ತಾ ಭಾರತಿ : 15 Apr, 2019

ರಾಂಚಿ, ಎ.15:  ಝಾರ್ಖಂಡ್ ನ ಗಿರಿಧಿ  ಜಿಲ್ಲೆಯ ಕಾಡಿನಲ್ಲಿ  ಸೋಮವಾರ ಬೆಳಗ್ಗೆ  ನಡೆದ ಎನ್ ಕೌಂಟರ್ ನಲ್ಲಿ ಮೂವರು ನಕ್ಸಲರು ಮೃತಪಟ್ಟಿದ್ದಾರೆ. ಇದೇ ವೇಳೆ ಸಿ ಆರ್ ಪಿಎಫ್ ನ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.

ಸಿ ಆರ್ ಪಿ ಎಫ್ ನ 7ನೇ ಬೆಟಾಲಿಯನ್ ರಾಂಚಿಯಿಂದ 185 ಕಿ.ಮೀ ದೂರದಲ್ಲಿರುವ ಬೆಲ್ಬಾಘಾಟ್ ನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾಗ ನಕ್ಸಲರು ಸಿ ಆರ್ ಪಿಎಫ್ ಯೋಧರತ್ತ ಗುಂಡು ಹಾರಿಸಿದರು. ಆಗ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ನಕ್ಸಲರು ಹತರಾದರು. ಯೋಧರೊಬ್ಬರು ಹುತಾತ್ಮರಾದರು ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)