varthabharthi

ರಾಷ್ಟ್ರೀಯ

ತುಲಾಭಾರ ನಡೆಸುತ್ತಿದ್ದಾಗ ತಕ್ಕಡಿ ತುಂಡಾಗಿ ಶಶಿ ತರೂರ್ ಗೆ ಗಾಯ

ವಾರ್ತಾ ಭಾರತಿ : 15 Apr, 2019

ತಿರುವನಂತಪುರ,ಎ.15: ವಿಷು ಅಂಗವಾಗಿ ಸೋಮವಾರ ಸ್ಥಳೀಯ ದೇವಸ್ಥಾನದಲ್ಲಿ ತುಲಾಭಾರ ನೆರವೇರಿಸುತ್ತಿದ್ದಾಗ ತಕ್ಕಡಿ ತುಂಡಾಗಿ ತಿರುವನಂತಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ  ಹಾಗೂ ಸಂಸದ  ಶಶಿ ತರೂರ್  ತಲೆಗೆ ಗಾಯವಾಗಿದೆ.

ತರೂರ್ ಅವರು ತುಲಾಭಾರ ನೆರವೇರಿಸಲು ತಕ್ಕಡಿಯಲ್ಲಿ ಕುಳಿತಿದ್ದಾಗ ಆಕಸ್ಮಿಕವಾಗಿ ತಕ್ಕಡಿ  ತುಂಡಾಗಿ ಕೆಳಗೆ ಬಿದ್ದು ಅವರು ಗಾಯಗೊಂಡರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಗಾಯಕ್ಕೆ ಆರು ಹೊಲಿಗೆ ಹಾಕಲಾಗಿದೆ, ಅವರು ಅಪಾಯದಿಂದ ಪಾರಾಗಿದ್ದಾರೆ. ಆದರೆ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಶಶಿ ತರೂರ್ ತಿರುವನಂತಪುರ ಕ್ಷೇತ್ರದಿಂದ ಮೂರನೇ ಬಾರಿ ಲೋಕಸಭೆಗೆ ಆಯ್ಕೆ ಬಯಸಿದ್ದಾರೆ. ಬಿಜೆಪಿ ಅಭ್ಯರ್ಥಿ ಕುಮ್ಮನಮ್ ರಾಜಶೇಖರನ್ ಅವರಿಗೆ ಪ್ರಮುಖ ಎದುರಾಳಿಯಾಗಿದ್ದಾರೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)