varthabharthi

ಕರಾವಳಿ

ಕೊಲ್ಲರಕೋಡಿ: ಎ.21ಕ್ಕೆ ‘ಔರಾನ್ ಟ್ರೋಫಿ’ ಕ್ರಿಕೆಟ್ ಪಂದ್ಯಾಟ

ವಾರ್ತಾ ಭಾರತಿ : 15 Apr, 2019

ಮಂಗಳೂರು,ಎ.15: ಔರಾನ್ ಫ್ಯಾಮಿಲಿ ಅರ್ಪಿಸುವ 11 ಜನರ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಎ.21 ಆದಿತ್ಯವಾರ ಬೆಳಗ್ಗೆ 9 ಗಂಟೆಗೆ ಕೊಲ್ಲರಕೋಡಿಯ ಕಾಸ್ಕ್ ಮೈದಾನದಲ್ಲಿ ನಡೆಯಲಿದೆ.

ಪಂದ್ಯದಲ್ಲಿ ವಿಜಯಶಾಲಿಯಾದವರಿಗೆ ಪ್ರಥಮ ಬಹುಮಾನ 30,000 ರೂ. ಹಾಗೂ ಔರಾನ್ ಟ್ರೋಫಿ, ದ್ವಿತೀಯ ಬಹುಮಾನ 15,000 ರೂ.  ಹಾಗೂ ಔರಾನ್ ಟ್ರೋಫಿ, ತೃತೀಯ ಮತ್ತು ಚತುರ್ಥ ಬಹುಮಾನ ಔರಾನ್ ಟ್ರೋಫಿ ನೀಡಲಾಗುತ್ತದೆ.

ಪಂದ್ಯಾಟಕ್ಕೆ ಆಯ್ದ 32 ತಂಡಗಳಿಗೆ ಮಾತ್ರ ಅವಕಾಶವಿದೆ. ಪ್ರವೇಶ ಶುಲ್ಕ 3,000 ಆಗಿರುತ್ತದೆ. ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ನೀಡಿದವರಿಗೆ  ಉತ್ತಮ ಎಸೆತಗಾರ, ಉತ್ತಮದಾಂಡಿಗ, ಸವ್ಯಸಾಚಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆಎಂದು ಪ್ರಕಟನೆ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)