varthabharthi

ಗಲ್ಫ್ ಸುದ್ದಿ

ವೆಬ್‌ಸೈಟ್‌ಗಳಿಗೆ ಕನ್ನ: ದುಬೈಯಲ್ಲಿ ಭಾರತೀಯನಿಗೆ ಜೈಲು

ವಾರ್ತಾ ಭಾರತಿ : 16 Apr, 2019

ದುಬೈ, ಎ. 16: ೧೫ ವೆಬ್‌ಸೈಟ್‌ಗಳಿಗೆ ಕನ್ನ ಹಾಕಿರುವುದಕ್ಕಾಗಿ 33 ವರ್ಷದ  ಭಾರತೀಯ ಮಾಹಿತಿ ತಂತ್ರಜ್ಞಾನ ಪ್ರೋಗ್ರಾಮರ್ ಒಬ್ಬನಿಗೆ ದುಬೈಯ ನ್ಯಾಯಾಲಯವೊಂದು ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

ಜೈಲು ಶಿಕ್ಷೆ ಅನುಭವಿಸಿದ ಬಳಿಕ ಆತನನ್ನು ಗಡಿಪಾರು ಮಾಡಲಾಗುತ್ತದೆ ಎಂದು ‘ಗಲ್ಫ್ ನ್ಯೂಸ್’ ವರದಿ ಮಾಡಿದೆ.

ಮಾಲೀಕರು ಆತನ ವೇತನದಿಂದ 1,080೦ ಡಾಲರ್ (ಸುಮಾರು 75,000 ರೂಪಾಯಿ) ಮೊತ್ತವನ್ನು ಕಡಿತಗೊಳಿಸಿದ ಹಿನ್ನೆಲೆಯಲ್ಲಿ ಆತನು ಸಂಸ್ಥೆಯ ಗ್ರಾಹಕ ವೆಬ್‌ಸೈಟ್‌ಗಳಿಗೆ ಕನ್ನಹಾಕಿದನು ಎಂದು ಆರೋಪಿಸಲಾಗಿದೆ.

ಈ ವ್ಯಕ್ತಿಯು ವೆಬ್‌ಸೈಟ್‌ಗಳಿಗೆ ಕನ್ನಹಾಕಿ ಬೆದರಿಕೆ ಹಾಕಿರುವುದು ಸಾಬೀತಾಗಿದೆ ಎಂದು ದುಬೈ ನ್ಯಾಯಾಲಯವೊಂದು ಸೋಮವಾರ ಹೇಳಿದೆ. ಅಪರಾಧಿಯ ಗುರುತನ್ನು ಬಹಿರಂಗಪಡಿಸಲಾಗಿಲ್ಲ.

ಮಾಧ್ಯಮ ಕಂಪೆನಿಯೊಂದರಲ್ಲಿ ಕಂಪ್ಯೂಟರ್ ಪ್ರೋಗ್ರಾಮರ್ ಆಗಿದ್ದ ವ್ಯಕ್ತಿಯ ಸಂಬಳದಿಂದ 75,000 ರೂಪಾಯಿ ಕಡಿತ ಮಾಡಲಾಗಿತ್ತು. ಇದರಿಂದ ಅಸಮಾಧಾನಗೊಂಡ ಆತ ಕೆಲಸಕ್ಕೆ ರಾಜೀನಾಮೆ ನೀಡಿ ಗ್ರಾಹಕ ವೆಬ್‌ಸೈಟ್‌ಗಳಿಗೆ ಕನ್ನ ಹಾಕುವುದಾಗಿ ಬೆದರಿಸಿದನು ಎಂದು ಆರೋಪಿಸಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)