varthabharthi

ಗಲ್ಫ್ ಸುದ್ದಿ

ಕೆಸಿಎಫ್ ಒಮಾನ್: ಸಲಾಲ ಝೋನ್ ನೂತನ ಪದಾಧಿಕಾರಿಗಳ ಆಯ್ಕೆ

ವಾರ್ತಾ ಭಾರತಿ : 17 Apr, 2019

ಒಮಾನ್,ಎ.17: ಕೆಸಿಎಫ್ ಒಮಾನ್ ಇದರ ಅಧೀನದಲ್ಲಿ ಕಾರ್ಯಚರಿಸುತ್ತಿರುವ ಸಲಾಲ ಝೋನ್ ಇದರ ಮಹಾಸಭೆಯು ಇತ್ತೀಚೆಗೆ ಅಬ್ದುಲ್ ಲತೀಫ್ ಸಿ.ಎ.ಸುಳ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

KCF ಒಮಾನ್ ರಾಷ್ಟ್ರೀಯಧ್ಯಕ್ಷ ಸಯ್ಯದ್ ಆಬಿದ್ ಅಲ್ ಹೈದ್ರೋಸಿ ತಂಙಳ್ ರವರು ಕಾರ್ಯಕ್ರಮದಲ್ಲಿ ಉದ್ಘಾಟಿಸಿದರು. ಸಯ್ಯದ್ ಮಹಮ್ಮದ್ ತಂಙಳ್ ಮಂಜೇಶ್ವರ ಅವರು ಪ್ರಾರ್ಥಿಸಿದರು.

ಬಳಿಕ ಸಲಾಲ ಝೋನ್ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಅಬ್ದುಲ್ ಲತೀಫ್ ಸಿ.ಎ.ಸುಳ್ಯ, ಪ್ರಧಾನ ಕಾರ್ಯದರ್ಶಿಯಾಗಿ ನಾಸಿರ್ ಇಬ್ರಾಹಿಂ ನಂದಾವರ, ಕೋಶಾಧಿಕಾರಿಯಾಗಿ ಬಶೀರ್ ಅಡ್ಕಾರ್, ಎಜುಕೇಷನ್ ವಿಭಾಗದ ಅಧ್ಯಕ್ಷರಾಗಿ ಖಲಂದರ್ ಶಾಫಿ, ಸಂಘಟನಾಧ್ಯಕ್ಷರಾಗಿ ಅಬ್ದುಲ್ ಕಯ್ಯೂಂ ಅಡ್ಕಾರ್, ಆಡಳಿತ ವಿಭಾಗದ ಅಧ್ಯಕ್ಷರಾಗಿ ಅಶ್ರಫ್ ಪಡುಬಿದ್ರೆ, ಸಾಂತ್ವನ ವಿಭಾಗದ ಅಧ್ಯಕ್ಷರಾಗಿ ಅಬ್ದುಲ್ ಕಾದರ್ ಸುಳ್ಯ, ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಕಬೀರ್ ಸುಳ್ಯ, ಇಹ್ಸಾನ್ ಇದರ ಅಧ್ಯಕ್ಷರಾಗಿ ಕಮಾಲ್ ಸುಳ್ಯ ಹಾಗೂ ಸದಸ್ಯರುಗಳಾಗಿ ಸ್ವದಕತುಲ್ಲಾ ಕಳಸ, ಫಾರಿಸ್ ಕೊಡಗು, ರಹೀಂ ಕೊಳ್ಕೇರಿ, ಅಬ್ದುಲ್ ಮಜೀದ್ ಕೊಡಗು, ಹನೀಫ್ ಸುಳ್ಯ, ನಾಸಿರ್ ಪಡುಬಿದ್ರಿ, ಅಬ್ದುಲ್ ಹಮೀದ್ ಮಂಜೇಶ್ವರ, ಅಶ್ರಫ್ ಉಳ್ಳಾಲ, ಹೈದರ್ ಸಜಿಪ, ಸಿದ್ದೀಕ್ ತ್ವೈಬಾ ಅವರನ್ನು ನೇಮಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಹನೀಫ್ ಸಅದಿ, ಸಂಘಟನಾಧ್ಯಕ್ಷ ಹಂಝ ಕನ್ನಂಗಾರ್, ಕಾಸಿಂ ಪೊಯ್ಯತ್ತಬೈಲ್ ಹಾಗೂ ಝೋನ್ ನಾಯಕರುಗಳು ಉಪಸ್ಥಿತರಿದ್ದರು. ಶಾಫಿ ಮುಸ್ಲಿಯಾರ್ ಸ್ವಾಗತಿಸಿ, ನೂತನ ಕಾರ್ಯದರ್ಶಿ ನಾಸಿರ್ ನಂದಾವರ ವಂದಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)