‘ನೋಟ್ರ ಡಾಮ್’ ಬೆಂಕಿ ನಂದಿಸಿದ ಸಿಬ್ಬಂದಿಗೆ ಧನ್ಯವಾದ ಸಲ್ಲಿಸಿದ ಪೋಪ್
ವ್ಯಾಟಿಕನ್ ಸಿಟಿ, ಎ. 17: ಫ್ರಾನ್ಸ್ ರಾಜಧಾನಿ ಪ್ಯಾರಿಸ್ನ ನೋಟ್ರ ಡಾಮ್ ಚರ್ಚ್ಗೆ ಹತ್ತಿಕೊಂಡ ಬೆಂಕಿಯನ್ನು ನಂದಿಸಲು ‘‘ಜೀವದ ಹಂಗು ತೊರೆದು’’ ಹೋರಾಡಿದ ಅಗ್ನಿಶಾಮಕ ಸಿಬ್ಬಂದಿಗೆ ಪೋಪ್ ಫ್ರಾನ್ಸಿಸ್ ಇಡೀ ಕೆಥೋಲಿಕ್ ಚರ್ಚ್ನ ಪರವಾಗಿ ಬುಧವಾರ ಧನ್ಯವಾದ ಸಲ್ಲಿಸಿದ್ದಾರೆ.
‘‘ಬ್ಯಾಸಿಲಿಕವನ್ನು ರಕ್ಷಿಸಲು ತಮ್ಮ ಜೀವದ ಹಂಗು ತೊರೆದು ತಮ್ಮಿಂದ ಸಾಧ್ಯವಾಗಿರುವುದನ್ನು ಮಾಡಿದ ಎಲ್ಲರಿಗೆ ಇಡೀ ಚರ್ಚ್ ಕೃತಜ್ಞತೆ ಸಲ್ಲಿಸುತ್ತದೆ’’ ಎಂದು ಸೇಂಟ್ ಪೀಟರ್ಸ್ ಚೌಕದಲ್ಲಿ ವಾರದ ಪ್ರಾರ್ಥನಾ ಸಭೆಯಲ್ಲಿ ಮಾತನಾಡಿದ ಪೋಪ್ ಹೇಳಿದರು.
Next Story