varthabharthi

ಗಲ್ಫ್ ಸುದ್ದಿ

ಕೆಸಿಎಫ್ ಕುವೈತ್ ಫರ್ವಾನಿಯಾ ಸೆಕ್ಟರ್ : ಪದಾಧಿಕಾರಿಗಳ ಆಯ್ಕೆ

ವಾರ್ತಾ ಭಾರತಿ : 21 Apr, 2019

ಕುವೈತ್: ಕೆಸಿಎಫ್ ಕುವೈತ್ ಫರ್ವಾನಿಯಾ ಸೆಕ್ಟರ್ ಇದರ ಪುನರ್ ರಚನೆ ಹಾಗೂ ಮಾಸಿಕ ಸ್ವಲಾತ್ ಮಜ್ಲಿಸ್ ಇಬ್ರಾಹಿಂ ಸಅದಿ ಅವರ ದುಆದೊಂದಿಗೆ ಆರಂಭವಾಯಿತು.

ಪುನರ್ ರಚನೆ ನೇತೃತ್ವವನ್ನು ಕೆಸಿಎಫ್ ರಾಷ್ಟ್ರೀಯ ಸಮಿತಿ ಶಿಕ್ಷಣ ಚೆಯರ್ ಮ್ಯಾನ್ ಉಮರುಲ್ ಫಾರೂಕ್ ಸಖಾಫಿ ವಹಿಸಿದ್ದರು. ರಾಷ್ಟ್ಕೀಯ ಸಮಿತಿ ಕೋಶಾಧಿಕಾರಿ ಮೂಸಾ ಇಬ್ರಾಹಿಂ, ರಾಷ್ಟ್ರೀಯ ಸಮಿತಿ ಆಡಳಿತ ವಿಭಾಗದ ಚೆಯರ್ ಮ್ಯಾನ್ ಅಬ್ದುಲ್ ಮಾಲಿಕ್, ರಾಷ್ಟ್ರೀಯ ಸಮಿತಿ ಸಂಘಟನಾ ಕನ್ವೀನರ್ ತೌಫೀಕ್ ಅಡ್ಡೂರು ಹಾಗು ಇತರರು ಈ ಸಂದರ್ಭ ಉಪಸ್ಥಿತರಿದ್ದರು.

ನೂತನ ಪದಾಧಿಕಾರಿಗಳು : ಅಧ್ಯಕ್ಷರಾಗಿ ಹೈದರ್ ಪಟ್ಟೋರಿ, ಕಾರ್ಯದರ್ಶಿಯಾಗಿ ಶಿರಾಜ್ ಶುಂಠಿಕೊಪ್ಪ, ಕೋಶಾಧಿಕಾರಿಯಾಗಿ ಮುಸ್ತಫ ಉಳ್ಳಾಲ, ಶಿಕ್ಷಣ ಅಧ್ಯಕ್ಷರಾಗಿ ಬಶೀರ್ ಗೋಣಿಕೊಪ್ಪ, ಶಿಕ್ಷಣ ಕಾರ್ಯದರ್ಶಿಯಾಗಿ ಅಶ್ರಫ್ ಮೂಳೂರು, ಸಾಂತ್ವನ ಅಧ್ಯಕ್ಷರಾಗಿ ಹಮೀದ್ ಮೂಳೂರ್, ಸಾಂತ್ವಾನ ಕಾರ್ಯದರ್ಶಿಯಾಗಿ ನವಾಝ್ ಹರೇಕಳ, ಪ್ರಕಾಶನ ಅಧ್ಯಕ್ಷರಾಗಿ ಶಾಫಿ ಜೋಕಟ್ಟೆ, ಪ್ರಕಾಶನ ಕಾರ್ಯದರ್ಶಿಯಾಗಿ ಸಲಾಂ ಉಜಿರೆ ಹಾಗೂ 18 ಮಂದಿ  ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆಯ್ಕೆ ಮಾಡಲಾಯಿತು.

ಹೈದರ್ ಪಟ್ಟೋರಿ ಸ್ವಾಗತಿಸಿ, ಇಕ್ಬಾಲ್ ಕಂದಾವರ ವರದಿ ವಾಚಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)