varthabharthi

ಗಲ್ಫ್ ಸುದ್ದಿ

ಯುಎಇ ಕನ್ನಡಿಗಾಸ್ ಬಿಸಿನೆಸ್ ಫೋರಂ: ಎರಡನೇ ವಾರ್ಷಿಕೋತ್ಸವ

ವಾರ್ತಾ ಭಾರತಿ : 21 Apr, 2019

ದುಬೈ :  ಯುಎಇ ಕನ್ನಡಿಗಾಸ್ ಬಿಸಿನೆಸ್ ಫೋರಂ ಇದರ ಎರಡನೇ ವಾರ್ಷಿಕೋತ್ಸವವು ದೇರಾ ದುಬೈಯಲ್ಲಿರುವ ಪರ್ಲ್ ಸಿಟಿ ಸುಯಿಟ್ಸ್ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.

ಈ  ಕಾರ್ಯಕ್ರಮಕ್ಕೆ ಸಂಯುಕ್ತ ಅರಬ್ ಸಂಸ್ಥಾನದ ವಿವಿಧ ಎಮಿರೇಟ್ ಗಳಿಂದ ವ್ಯಾಪಾರಸ್ಥ ಕನ್ನಡಿಗರು ತಮ್ಮ ಕಂಪನಿ ಬಗ್ಗೆ ಮತ್ತು ಅವರಲ್ಲಿ ಸಿಗುವ ವಸ್ತುಗಳ ಬಗ್ಗೆ ಪ್ರೊಜೆಕ್ಟರ್ ಬಳಸಿ ವಿವರಿಸಿದರು.

ಈ ಸಂದರ್ಭ ಫೋರಂ ಸದಸ್ಯರಾದ ಮಧು ಗೌಡರ್, ರಫೀಕಲಿ ಕೊಡಗು ಅವರು ಮಾತನಾಡಿ ಫೋರಮ್ ಉದ್ದೇಶ ಮತ್ತು ಉಪಯೋಗಗಳನ್ನುಮತ್ತು ಇದರ ವೆಬ್ ಸೈಟ್ ನಲ್ಲಿ ಯುಎಇ ಯಲ್ಲಿ ನಡೆಯುವ ಕನ್ನಡ ಕಾರ್ಯಕ್ರಮಗಳ ಬಗ್ಗೆ ಮಾಹಿತಿ, ಕನ್ನಡಿಗ ವ್ಯಾಪಾರಸ್ಥ ಕಂಪೆನಿಗಳ ಬಗ್ಗೆ ಮಾಹಿತಿ, ಕೆಲಸ ಹುಡುಕಿ ಬಂದ ಕನ್ನಡಿಗರಿಗೆ ಕೆಲಸಗಳ ಬಗ್ಗೆ ಮಾಹಿತಿ, ಯುಎಇ ದೇಶದದಲ್ಲಿನ ದೈನಂದಿನ ವಾರ್ತೆ ಇತ್ಯಾದಿ ಹಲವು ಉಪಯುಕ್ತ ಮಾಹಿತಿಗಳನ್ನು ಕನ್ನಡಿಗರಿಗಾಗಿ ಈ ಅಂತರ್ಜಾಲದಲ್ಲಿ ಒಳಗೊಂಡಿರುತ್ತೆ ಎಂದು ತಿಳಿಸಿದರು.

ಯುಎಇ  ಕನ್ನಡಿಗರು ಕುಟುಂಬದ ಸದಸ್ಯ ವಿಷ್ಣುಮೂರ್ತಿ ವಂದಿಸಿದರು. ಸೆಂತಿಲ್ , ಸುದೀಪ್, ಶಶಿಧರ್, ಪಲ್ಲವಿ, ಮಮತಾ ಮತ್ತು ಅನಿತಾ ಅವರು ಕಾರ್ಯಕ್ರಮದಲ್ಲಿ ಸಹಕರಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)