varthabharthi

ಓ ಮೆಣಸೇ

ಓ ಮೆಣಸೇ…

ವಾರ್ತಾ ಭಾರತಿ : 22 Apr, 2019
ಪಿ.ಎ.ರೈ


ರಾಜಕಾರಣದಲ್ಲಿ ಧರ್ಮ ಇರಬೇಕೇ ಹೊರತು ಧರ್ಮದಲ್ಲಿ ರಾಜಕಾರಣ ಇರಬಾರದು - ಡಿ.ಕೆ.ಶಿವಕುಮಾರ್, ಸಚಿವ
  
ರಾಜಕಾರಣದಲ್ಲಿ ಜಾತಿ ಮತ್ತು ಹಣ ಮಾತ್ರ ಇರಲೇಬೇಕು.

---------------------
ಪ್ರಧಾನಿ ಮೋದಿ ಅಪೂರ್ವ ಮಾಣಿಕ್ಯ
- ನಿರ್ಮಲಾಸೀತಾರಾಮನ್, ಕೇಂದ್ರ ಸಚಿವೆ
ಪ್ರಧಾನಿಯ ಕೈಯಲ್ಲಿ ದೇಶ, ಮಂಗನ ಕೈಯಲ್ಲಿ ಮಾಣಿಕ್ಯ.
---------------------
ದೇಶಕ್ಕೆ ಮಾಜಿ ಪ್ರಧಾನಿ ದೇವೇಗೌಡರ ನಾಯಕತ್ವ ಅಗತ್ಯವಿದೆ
- ಚಂದ್ರಬಾಬು ನಾಯ್ಡು, ಆಂಧ್ರಪ್ರದೇಶದ ಮುಖ್ಯಮಂತ್ರಿ
ಅವರೀಗ ಮಂಡ್ಯದ ನಾಯಕತ್ವದಲ್ಲಿ ಬಿಝಿಯಾಗಿದ್ದಾರೆ.

---------------------
ನನಗೆ ಟಿಕೆಟ್ ತಪ್ಪಿದ್ದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ - ತೇಜಸ್ವಿನಿ ಅನಂತಕುಮಾರ್, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ
 ಈ ಥರದ ಪ್ರಶ್ನೆಗಳಿಗೆ ಬಿಜೆಪಿಯೊಳಗೆ ಉತ್ತರಗಳಿಲ್ಲ.

---------------------
ನಮ್ಮ ಕುಟುಂಬ ಭಾರತವನ್ನು ಒಡೆಯಲು ಬಯಸಿದ್ದರೆ ಈಗ ಭಾರತವೇ ಇರುತ್ತಿರಲಿಲ್ಲ - ಫಾರೂಕ್ ಅಬ್ದುಲ್ಲಾ, ನ್ಯಾಶನಲ್ ಕಾನ್ಫರೆನ್ಸ್ ನಾಯಕ
ಆ ಕೆಲಸವನ್ನೀಗ ಸಂಘಪರಿವಾರ ಕೈಗೆತ್ತಿಕೊಂಡಿದೆ.

---------------------
ಉತ್ತಮ ಪ್ರಜಾಕೀಯ ಪಕ್ಷ ಬೂದಿ ಮುಚ್ಚಿದ ಕೆಂಡದಂತೆ
- ಉಪೇಂದ್ರ, ಪ್ರಜಾಕೀಯ ಪಕ್ಷದ ನಾಯಕ
 ಜನರ ಕೈಗೆ ಬರೀ ಬೂದಿ ಕೊಡುವ ಯೋಚನೆಯಿದ್ದಂತಿದೆ.

---------------------
ಹೆಸರು ಕೆಡಿಸಿಕೊಳ್ಳಲು ನಾನು ರಾಜ್ಯಕ್ಕೆ ಬಂದಿಲ್ಲ - ಪ್ರಕಾಶ್ ರೈ, ನಟ
ಇರುವ ಹಣ ಕಳೆದುಕೊಳ್ಳುವುದಕ್ಕಾಗಿ ಇರಬಹುದೇ?
---------------------
ನಾನು ಭವಿಷ್ಯ ಹೇಳುತ್ತೇನೆ - ಮೋದಿ ಮತ್ತೆ ಪ್ರಧಾನಿಯಾಗುತ್ತಾರೆ - ಎಸ್.ಎಂ.ಕೃಷ್ಣ, ಮಾಜಿ ಮುಖ್ಯಮಂತ್ರಿ
ನಿಮಗಿಂತ ಸಂತೆಯಲ್ಲಿ ಗಿಣಿಶಾಸ್ತ್ರ ಹೇಳುವವನೇ ವಾಸಿ.
---------------------
ನಾನು ಮುಖ್ಯಮಂತ್ರಿಯಾಗಿರುವುದು ಸೋನಿಯಾ - ರಾಹುಲ್‌ಗಾಂಧಿಯಿಂದ - ಕುಮಾರಸ್ವಾಮಿ, ಮುಖ್ಯಮಂತ್ರಿ
ಮತದಾರರು ಮತಹಾಕಿದ್ದು ವ್ಯರ್ಥವಾಯಿತು.

---------------------
ಕಾಂಗ್ರೆಸ್ ಪ್ರಣಾಳಿಕೆ ನಕ್ಸಲರಿಗೂ ಸ್ಫೂರ್ತಿ - ನರೇಂದ್ರಮೋದಿ, ಪ್ರಧಾನಿ
ನಿಮಗೆ ಮಾತ್ರ ಪ್ರಜ್ಞಾ ಸಿಂಗ್ ಠಾಕೂರ್ ಸ್ಫೂರ್ತಿ.

---------------------
ದೇಶದ ಸೇವೆ ಮಾಡುವ ಸೌಭಾಗ್ಯವನ್ನ್ನು ನನಗೆ ಕಾಂಗ್ರೆಸ್ ಪಕ್ಷ ನೀಡಿತ್ತು - ಜನಾರ್ದನ ಪೂಜಾರಿ, ಕಾಂಗ್ರೆಸ್ ಮುಖಂಡ
ಅದಕ್ಕಾಗಿ ಕಾಂಗ್ರೆಸ್‌ಗೆ ನೀವೇನು ಕೊಟ್ಟಿರಿ?
---------------------
ಬಿಜೆಪಿಯಲ್ಲಿದ್ದರೂ ದಲಿತ ಪರ ಚಿಂತನೆ ಬದಲಾಗದು - ಶ್ರೀನಿವಾಸಪ್ರಸಾದ್, ಮಾಜಿ ಸಚಿವ
ಬಿಜೆಪಿಯ ಚಿಂತನೆ ಬದಲಾಗುವ ಅಗತ್ಯವಿಲ್ಲವೇ?
---------------------
ಪ್ರಧಾನಿ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಶುಂಭ - ನಿಶುಂಭರಿದ್ದಂತೆ - ಸಿ.ಎಂ.ಇಬ್ರಾಹೀಂ, ವಿ.ಪ.ಸದಸ್ಯ
ಸದ್ಯಕ್ಕೆ ನಿಮ್ಮದು ಮಹಿಷಾಸುರನ ಪಾತ್ರವೇ?
---------------------
ನಾನು ಯಾವತ್ತು ಬಿಜೆಪಿ ತೊರೆಯುತ್ತೇನೋ ಅಂದೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ - ವರುಣ್‌ಗಾಂಧಿ, ಸಂಸದ
ಬಿಜೆಪಿಯೇ ನಿಮ್ಮನ್ನು ತೊರೆಯುವ ಸೂಚನೆಗಳು ಕಾಣುತ್ತಿವೆ.

---------------------
ಮುಖ್ಯಮಂತ್ರಿ ಕುಮಾರಸ್ವಾಮಿ ನೂರು ಬಾರಿ ಮೈತೊಳೆದರೂ ಬೆಳ್ಳಗಾಗುವುದಿಲ್ಲ - ರಾಜುಕಾಗೆ, ಶಾಸಕ
ಕಪ್ಪು ಬಣ್ಣವೇ ಈ ದೇಶದ ನಿಜವಾದ ಚರಿತ್ರೆ.

---------------------
ಎಚ್.ಡಿ.ದೇವೇಗೌಡರ ಮನೆಯಲ್ಲಿ ಪ್ರಧಾನಿ ಮೋದಿಗೆ ಮತ ಹಾಕುವವರಿದ್ದಾರೆ - ಬಿ.ಎಲ್.ಸಂತೋಷ್, ಬಿಜೆಪಿ ಮುಖಂಡ
ಈ ಬಾರಿ ಯಡಿಯೂರಪ್ಪ ಬಿಜೆಪಿಗೆ ಮತ ಹಾಕಿದ್ದಾರಾ ಎನ್ನುವುದನ್ನೊಮ್ಮೆ ಖಚಿತ ಪಡಿಸಿಕೊಳ್ಳಿ..

---------------------
ಎಲ್ಲ ಮೋದಿಗಳೂ ಕಳ್ಳರು - ರಾಹುಲ್‌ಗಾಂಧಿ, ಕಾಂಗ್ರೆಸ್ ಅಧ್ಯಕ್ಷ
 ಕಳ್ಳರೆಲ್ಲ ಮೋದಿಗಳಲ್ಲ ....ಎಂದರಂತೆ ಪ್ರಧಾನಿ ಮೋದಿ.

---------------------
ಶಾಸಕ ಸಿ.ಟಿ.ರವಿ ನಾಲಿಗೆ ಚಪ್ಪಲಿ ಇದ್ದಂತೆ - ಜಯಮಾಲಾ, ಸಚಿವೆ
ಚಪ್ಪಲಿಗೆ ಒಂದು ಘನತೆಯಿದೆ.

---------------------
ಪ್ರಧಾನಿ ಮೋದಿ ಬೇರೆಯವರ ಕುಟುಂಬವನ್ನು ಇಣುಕಿ ನೋಡುತ್ತಾರೆ, ಯಾಕೆಂದರೆ ಅವರಿಗೆ ಸ್ವಂತ ಕುಟುಂಬ ಇಲ್ಲ - ಶರದ್‌ಪವಾರ್, ಎನ್‌ಸಿಪಿ ಮುಖ್ಯಸ್ಥ
ಅಂಬಾನಿ, ಅದಾನಿ ಅವರ ಕುಟುಂಬವಲ್ಲವೇ?
---------------------
ಡಾ.ಅಂಬೇಡ್ಕರ್ ಸಾಗಿ ಬಂದ ಹಾದಿ ಎಲ್ಲರಿಗೂ ಆದರ್ಶ
- ಕೋಟ ಶ್ರೀನಿವಾಸ ಪೂಜಾರಿ, ವಿ.ಪ.ವಿ.ನಾಯಕ
ಆ ಹಾದಿಯ ತುಂಬಾ ಕಳ್ಳು ಮುಳ್ಳುಗಳಿವೆ ಎಚ್ಚರಿಕೆ.

---------------------
ಪ್ರಧಾನಿ ಮೋದಿ ಜನರ ಹೃದಯ ಗೆದ್ದ ಚೋರ - ವಿಜಯ ಸಂಕೇಶ್ವರ್, ಮಾಜಿ ಸಂಸದ
ಚೌಕಿದಾರ್ ಚೋರ್ ಹೇ ಎನ್ನುವುದು ಇದಕ್ಕೇ ಅಂತೀರಾ?
---------------------
ತಾತನ ಪಾತ್ರ ಕೊಟ್ಟರೂ ಮಾಡುತ್ತೇನೆ - ರವಿಚಂದ್ರನ್, ಚಿತ್ರ ನಟ
ಈ ವಯಸ್ಸಲ್ಲಿ ತಾತನ ಪಾತ್ರವಲ್ಲದೆ, ಇನ್ನಾವ ಪಾತ್ರ ಮಾಡಲು ಸಾಧ್ಯ?
---------------------
ಇವಿಎಂ ಬಗ್ಗೆ ಈಗಲೂ ಅನುಮಾನವಿದೆ
- ಡಾ.ಜಿ.ಪರಮೇಶ್ವರ್, ಉಪ ಮುಖ್ಯಮಂತ್ರಿ
ಫಲಿತಾಂಶ ಹೊರಬಿದ್ದ ಬಳಿಕ ಅನುಮಾನವನ್ನು ಬಹಿರಂಗಪಡಿಸುವ ಯೋಚನೆಯೇ?
---------------------

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು