varthabharthi

ನಿಧನ

ಜಿಲ್ಲಾ ಪರಿಷತ್ ಮಾಜಿ ಸದಸ್ಯ ಅಬ್ದುಲ್ ಖಾದರ್ ಹಾಜಿ ಅಳೇಕಲ ನಿಧನ

ವಾರ್ತಾ ಭಾರತಿ : 22 Apr, 2019

ಉಳ್ಳಾಲ, ಎ.22: ಉಳ್ಳಾಲ ಅಳೇಕಲ ನಿವಾಸಿ ಅಬ್ದುಲ್ ಖಾದರ್ ಹಾಜಿ(82) ಸೋಮವಾರ ಮುಂಜಾನೆ ತನ್ನ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
 
ಉಳ್ಳಾಲ ಕೇಂದ್ರ ಜುಮಾ ಮಸೀದಿಯ ಮಾಜಿ ಉಪಾಧ್ಯಕ್ಷರಾಗಿ, ಅಳೇಕಲ ಜುಮಾ ಮಸೀದಿಯ ಮಾಜಿ ಅಧ್ಯಕ್ಷರಾಗಿ, ಜಿಲ್ಲಾ ಪರಿಷತ್ ಮಾಜಿ ಸದಸ್ಯರಾಗಿ, ಅಳೇಕಲ ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ನ ಮಾಜಿ ಅಧ್ಯಕ್ಷರಾಗಿ, ನೂರಾನಿ ಯತೀಮ್ ಖಾನ್ ಸದಸ್ಯರಾಗಿದ್ದ ಅಬ್ದುಲ್ ಖಾದರ್ ಸ್ಥಳೀಯವಾಗಿ ‘ಮೀಸೆ ಖಾದಿರಾಕ’ ಎಂದೇ ಗುರುತಿಸಲ್ಪಟ್ಟಿದ್ದರು.

ಕಾಂಗ್ರೆಸ್ ಪಕ್ಷದ ಸಕ್ರಿಯರಾಗಿದ್ದ ಅಬ್ದುಲ್ ಖಾದರ್ ಅವರು ಪತ್ನಿ ಮತ್ತು ಓರ್ವ ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಸಂತಾಪ: ಅಬ್ದುಲ್ ಖಾದರ್ ಅವರ ನಿಧನಕ್ಕೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿ ಸೆನೆಟ್ ಸದಸ್ಯ ಯು.ಟಿ.ಇಫ್ತಿಕಾರ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್, ಅಳೇಕಲ ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುಹಮ್ಮದ್ ತ್ವಾಹ ಮತ್ತು ಸದಸ್ಯರು ಸಂತಾಪ ಸೂಚಿಸಿದ್ದಾರೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)