varthabharthi

ನಿಧನ

ಮುಳ್ಕಾಡು ಶಿವರಾಮ ಶೆಟ್ಟಿ

ವಾರ್ತಾ ಭಾರತಿ : 22 Apr, 2019

ಹೆಬ್ರಿ, ಎ.22: ಕಾರ್ಲ ಶಿವರಾಮ ಶೆಟ್ಟಿ ಎಂದೇ ಖ್ಯಾತರಾದ ಗುತ್ತಿಗೆದಾರ ಎಳ್ಳಾರೆ ಗ್ರಾಮದ ಮುಲ್ಲಾಡು ಶಿವರಾಮ ಶೆಟ್ಟಿ (80) ಸೋಮವಾರ ಕಾರ್ಕಳದ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಎಂಜಿನಿಯರಿಂಗ್ ಪದವೀಧರರಾಗಿ ಕಾರ್ಲ ಕನ್‌ಸ್ಟ್ರಕ್ಷನ್ ಎಂಬ ಉದ್ಯಮ ವನ್ನು ಸ್ಥಾಪಿಸಿ ನೂರಾರು ಜನರಿಗೆ ಉದ್ಯೋಗದಾತರಾಗಿದ್ದರು. ಮುಳ್ಕಾಡು ಮನೆತನದ ಎಂ.ಶಿವರಾಮ ಶೆಟ್ಟಿ ಪ್ರಗತಿಪರ ಕೃಷಿಕರಾಗಿ ಧಾರ್ಮಿಕ ಮುಖಂಡರಾಗಿ, ದಾನ ಧರ್ಮದಲ್ಲಿ ಹೆಸರಾಗಿದ್ದರು. ಶಿಕ್ಷಣ ಪ್ರೇಮಿ ಯಾಗಿದ್ದ ಶಿವರಾಮ ಶೆಟ್ಟರು ಯಾವುದೇ ಪ್ರಚಾರವಿಲ್ಲದೆ ನೂರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಉನ್ನತ ಶಿಕ್ಷಣಕ್ಕೆ ನೆರವಾಗಿದ್ದಾರೆ. ಇತಿಹಾಸ ಪ್ರಸಿದ್ಧ ಎಳ್ಳಾರೆ ಇರ್ವತ್ತೂರು ಲಕ್ಷ್ಮೀಜನಾರ್ಧನ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಊರಿನವರ ಸಹಕಾರದಲ್ಲಿ ವಿಶಿಷ್ಠ ಮಾದರಿಯಲ್ಲಿ ದೇವಸ್ಥಾನವನ್ನು ಜೀಣೆರ್ ದ್ಧಾರ ಗೊಳಿಸಿದ್ದರು.

ಕಾರ್ಕಳ ಶಾಸಕ ಸುನೀಲ್ ಕುಮಾರ್, ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ ಸಹಿತ ಸಾವಿರಾರು ಮಂದಿ ಮೃತರ ಅಂತಿಮ ದರ್ಶನ ಪಡೆದರು. ಬಳಿಕ ಎಳ್ಳಾರೆ ಮುಳ್ಕಾಡಿನ ಮೂಲ ಮನೆಯ ತೋಟದಲ್ಲಿ ಅಂತಿಮ ಸಂಸ್ಕಾರ ನಡೆಯಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)