varthabharthi

ನಿಮ್ಮ ಅಂಕಣ

ಬೆಟ್ಟಿಂಗ್ ಹಾವಳಿ

ವಾರ್ತಾ ಭಾರತಿ : 22 Apr, 2019
-ವಿಠಲ ಆರ್., ಯಂಕಂಚಿ, ಬಮ್ಮನಜೋಗಿ

ಮಾನ್ಯರೇ,
ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್‌ನಿಂದ ಹಿಡಿದು ಚುನಾವಣೆಯವರೆಗೆ, ಹಳ್ಳಿಯಿಂದ ದಿಲ್ಲಿಯವರೆಗೆ ಬೆಟ್ಟಿಂಗ್ ದಂಧೆ ಜೋರಾಗಿದೆ. ರಾಜ್ಯದೆಲ್ಲೆಡೆ ಬರಗಾಲವಿದ್ದರೂ ಜೀವನದ ಮುಂದಿನ ಭವಿಷ್ಯ ನೋಡದೆ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿ ಹೊಲ, ಗದ್ದೆ, ಮನೆ, ಬಂಗಾರದಂತಹ ಬೆಲೆ ಬಾಳುವ ವಸ್ತುಗಳನ್ನು ಅಡವಿಟ್ಟು ಬೆಟ್ಟಿಂಗ್ ಆಡುತ್ತಿರುವುದು ನೋವಿನ ಸಂಗತಿ.
ಸಣ್ಣ ಮಕ್ಕಳಿಂದ ಹಿಡಿದು ಮುದುಕರವರೆಗೆ ಈ ಚಟಕ್ಕೆ ದಾಸರಾಗಿದ್ದಾರೆ. ಶಾಲಾ ಕಾಲೇಜು ಮಕ್ಕಳು, ಯುವಕರು, ಉದ್ಯೋಗಿಗಳು, ನಿರುದ್ಯೋಗಿಗಳು, ರೈತರು ಎಲ್ಲರೂ ಬೆಟ್ಟಿಂಗ್‌ನ್ನು ಹವ್ಯಾಸವಾಗಿಸಿಕೊಂಡು ಈಗ ಅದಕ್ಕೆ ಹೊಂದಿಕೊಂಡು ಬಿಟ್ಟಿದ್ದಾರೆ. ಕೆಲವೆಡೆ ಇದು ವಿಪರೀತವಾಗಿ ಬೆಟ್ಟಿಂಗ್‌ಗಾಗಿ ಸಾಲಶೂಲ ಮಾಡಿ, ಕುಟುಂಬದವರಿಗೆ ಹೊರೆಯಾಗಿ ಆತ್ಮಹತ್ಯೆಯಂತಹ ಕೃತ್ಯಕ್ಕೆ ಮುಂದಾಗುತ್ತಿದ್ದಾರೆ.
ಇನ್ನಾದರೂ ಬೆಟ್ಟಿಂಗ್‌ನಂತಹ ಸಾಮಾಜಿಕ ಪೀಡೆಯನ್ನು ಮಟ್ಟಹಾಕಲು ಪೊಲೀಸ್ ಇಲಾಖೆ ಹೆಚ್ಚಿನ ಶ್ರಮ ವಹಿಸಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)