varthabharthi

ಗಲ್ಫ್ ಸುದ್ದಿ

ದಾರುನ್ನೂರ್ ವತಿಯಿ೦ದ ದುಬೈಯಲ್ಲಿ 'ವಿಷನ್ ಕರ್ನಾಟಕ - 2030' ಕಾರ್ಯಕ್ರಮ

ವಾರ್ತಾ ಭಾರತಿ : 23 Apr, 2019

ದುಬೈ: ದಾರುನ್ನೂರ್ ಎಜುಕೇಶನ್ ಸೆ೦ಟರ್ ಕಾಶಿಪಟ್ಣ ಮೂಡುಬಿದಿರೆ ಇದರ ಯುಎಇ ಕಲ್ಚರಲ್ ಸೆ೦ಟರ್ ವತಿಯಿ೦ದ ಬರ್ ದುಬೈಯಲ್ಲಿರುವ ಹೋಲಿಡೇ ಇನ್ ಹೋಟೆಲ್ ನಲ್ಲಿ 'ವಿಷನ್ ಕರ್ನಾಟಕ - 2030' ಕಾರ್ಯಕ್ರಮ ನಡೆಯಿತು.

ದಾರುನ್ನೂರ್ ಯುಎಇ ಅಧ್ಯಕ್ಷ ಸ೦ಶುದ್ದೀನ್ ಸೂರಲ್ಪಾಡಿ ಅವರ ಅಧ್ಯಕ್ಷತೆಯಲ್ಲಿ  ನೆರವೇರಿತು.

ಮುಖ್ಯ ಅತಿಥಿಗಳಾಗಿ ದಾರುನ್ನೂರ್ ಕೇ೦ದ್ರ ಸಮಿತಿ ಅಧ್ಯಕ್ಷರೂ, ಸಮಸ್ತ ಕೇರಳ ಜ೦ಇಯ್ಯತುಲ್ ಉಲಮಾ ಕೇ೦ದ್ರ ಮುಶಾವರ ಸದಸ್ಯರೂ, ದಕ್ಷಿಣ ಕನ್ನಡ ಜಿಲ್ಲಾ ಖಾಝಿಯೂ, ದಾರುನ್ನೂರ್ ವಿದ್ಯಾ ಕೇ೦ದ್ರದ ರುವಾರಿಯೂ ಆದ ಶೈಖುನಾ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ, ದಾರುನ್ನೂರ್ ಕೇ೦ದ್ರ ಸಮಿತಿಯ ಉಪಾಧ್ಯಕ್ಷ ಅಬ್ದುಲ್ ರಝಾಕ್ ಬಿ.ಸಿ. ರೋಡ್, ಸಯ್ಯದ್ ಆಸ್ಕರ್ ಅಲಿ ತಂಙಳ್, ಡಾ. ಝುಬೈರ್ ಹುದವಿ, ಉಸ್ತಾದ್ ನೌಫಲ್ ಹುದವಿ ಮೊದಲಾದವರು ಭಾಗವಹಿಸಿದ್ದರು.

ಶೈಖುನಾ ತ್ವಾಕಾ ಉಸ್ತಾದರ ದುಆ ದ ಬಳಿಕ ಕಾರ್ಯಕ್ರಮವು ಮಾಸ್ಟರ್ ಸಾಮಿತ್ ಸಮೀರ್ ಇಬ್ರಾಹಿ೦ ಅವರ ಕಿರಾಅತ್ ನೊ೦ದಿಗೆ  ಅರ೦ಭ ಗೊ೦ಡಿತು.  ಸ೦ಶುದ್ದೀನ್ ಸೂರಲ್ಪಾಡಿ ಸ್ವಾಗತಿಸಿದರು. ಶಹೀದ್  ಸಿಎ೦ ಅಬ್ದುಲ್ಲಾ ಮುಸ್ಲಿಯಾರ್ 'ವಿಷನ್ ಕರ್ನಾಟಕ -2030' ಈ ಕಾರ್ಯಕ್ರಮದ ಬಗ್ಗೆ ವಿವರಿಸಿದರು.

ಕಾರ್ಯ ಕ್ರಮವನ್ನು ಶೈಖುನಾ ತ್ವಾಕಾ ಉಸ್ತಾದ್  ಉದ್ಘಾಟಿಸಿದರು.ದಾರುನ್ನೂರ್ ವಿದ್ಯಾ ಕೇ೦ದ್ರದ ಪರಿಚಯ ಮತ್ತು ಯೋಜನೆಗಳ ಮಾಹಿತಿಯನ್ನು ದಾರುನ್ನೂರ್ ಯು ಎ ಇ ಪ್ರಧಾನ ಕಾರ್ಯದರ್ಶಿ ಬದ್ರುದ್ದೀನ್ ಹೆ೦ತಾರ್ ವಿವರಿಸಿದರು. ನೌಫಲ್ ಹುದವಿ, ಡಾಕ್ಟರ್ ಝುಬೈರ್ ಹುದವಿ ಅಲಿ ಅಸ್ಕರ್ ಹುದವಿ ಅವರು ಈ ಸಂದರ್ಭದಲ್ಲಿ ಮಾತನಾಡಿದರು.

ಅಲಿ ಅಸ್ಕರ್ ಹುದವಿ ಕಾರ್ಯಕ್ರಮ ನಿರೂಪಿಸಿದರು. ಅಶ್ರಫ್ ಬಾಳೆಹೊನ್ನೂರ್  ವ೦ದಿಸಿದರು. ಮಹಮ್ಮದ್ ಮುಸ್ತಾಕ್ ಕದ್ರಿ,  ಮಹಮ್ಮದ್ ರಫೀಕ್ ಸುರತ್ಕಲ್ , ಸಾಜಿದ್ ಬಜ್ಪೆ,  ಸಮೀರ್ ಇಬ್ರಾಹಿಮ್ ಕಲ್ಲರೆ,  ಮಹಮ್ಮದ್  ರಫೀಕ್ ಆತೂರು ,  ರವೂಫ್ ಹಾಜಿ ಕೈಕಂಬ,  ಸಫಾ ಇಸ್ಮಾಯಿಲ್  ಬಜ್ಪೆ,  ನವಾಝ್ ಬಿ.ಸಿ  ರೋಡ್ .  ಅಶ್ರಫ್ ಪರ್ಲಡ್ಕ ಮೊದಲಾದವರು ಸಹಕರಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)