varthabharthi

ನಿಮ್ಮ ಅಂಕಣ

ಮಾನಸಿಕ ಆರೋಗ್ಯ ಶಿಬಿರಗಳಾಗಲಿ

ವಾರ್ತಾ ಭಾರತಿ : 23 Apr, 2019
-ಶ್ವೇತಾ ಬಿ. ಎಲೆಬೇತೂರು, ದಾವಣಗೆರೆ

ಮಾನ್ಯರೇ,

ಕಳೆದ 3-4 ವರ್ಷಗಳಿಂದ ದಾವಣಗೆರೆಯ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಅಂಗವಾಗಿ ಹರಿಹರ, ದಾವಣಗೆರೆ ಮಾತ್ರವಲ್ಲದೆ ಹರಪನಹಳ್ಳಿ ತಾಲೂಕಿನಲ್ಲಿ ಸಹ ಪ್ರತಿ ತಿಂಗಳು ಮಾನಸಿಕ ಆರೋಗ್ಯದ ಚಿಕಿತ್ಸಾ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದ್ದರು. ಇದರಿಂದ ತಾಲೂಕು ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 250ರಿಂದ 300 ಮಾನಸಿಕ ಅಸ್ವಸ್ಥರು ಪ್ರತಿ ತಿಂಗಳು ನಿಗದಿತ ಸಮಯದಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಇದರಿಂದ ಜಿಲ್ಲೆಯ ಮಾನಸಿಕ ಅಸ್ವಸ್ಥರು ಕಾಯಿಲೆಯಿಂದ ಚೇತರಿಕೆಯಲ್ಲಿರುತ್ತಿದ್ದರು. ಆದರೆ ಈಗ ಹರಪನಹಳ್ಳಿ ತಾಲೂಕು ಬಳ್ಳಾರಿ ಜಿಲ್ಲೆಗೆ ಸೇರ್ಪಡೆಯಾಗಿರುವುದರಿಂದ ಕಳೆದ ಮೂರು ತಿಂಗಳುಗಳಿಂದ ಮಾನಸಿಕ ಆರೋಗ್ಯದ ಚಿಕಿತ್ಸೆ ಶಿಬಿರವು ನಿಂತಿದ್ದು, ಮಾನಸಿಕ ಕಾಯಿಲೆಯ ವ್ಯಕ್ತಿಗಳ ಕುಟುಂಬಕ್ಕೆ ತುಂಬಾ ತೊಂದರೆಯಾಗುತ್ತಿದೆ. ಈ ವ್ಯಕ್ತಿಗಳನ್ನು ಬೇರೆ ಕಡೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲು ಪೋಷಕರು ಆರ್ಥಿಕವಾಗಿ ಸಶಕ್ತರಾಗಿಲ್ಲ. ಹೀಗಾಗಿ ಕಾಯಿಲೆಯ ಲಕ್ಷಣಗಳು ಹೆಚ್ಚಾಗುತ್ತಿದೆ. ಇದರಿಂದ ಮಾನಸಿಕ ಅಸ್ವಸ್ಥರ ಕುಟುಂಬ ಮತ್ತು ಸಮುದಾಯಕ್ಕೆ ತುಂಬಾ ತೊಂದರೆಗಳಾಗುತ್ತಿವೆ. ಆದ್ದರಿಂದ ಬಳ್ಳಾರಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವೈದ್ಯಾಧಿಕಾರಿಗಳು ಶೀಘ್ರವೇ ಮಾನಸಿಕ ಆರೋಗ್ಯದ ಶಿಬಿರಗಳನ್ನು ಆರಂಭಿಸುವ ಮೂಲಕ ಮಾನಸಿಕ ಅಸ್ವಸ್ಥರ ಕುಟುಂಬಕ್ಕೆ ನೆರವಾಗಲು ಮುಂದಾಗಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)