varthabharthi

ಗಲ್ಫ್ ಸುದ್ದಿ

ಕೆಸಿಎಫ್ ಒಮಾನ್, ಸೊಹಾರ್ ಸೆಕ್ಟರ್ ಮಹಾಸಭೆ

ವಾರ್ತಾ ಭಾರತಿ : 24 Apr, 2019

ಒಮಾನ್,ಎ.23: ಕೆಸಿಎಫ್ ಒಮಾನ್ ಸೊಹಾರ್ ಝೋನ್ ಇದರ ಅಧೀನದಲ್ಲಿ ಕಾರ್ಯಚರಿಸಿತ್ತಿರುವ ಸೊಹಾರ್ ಸೆಕ್ಟರ್ ಇದರ ಮಹಾಸಭೆಯು ಇತ್ತೀಚೆಗೆ  ಅಧ್ಯಕ್ಷ ನಿಸಾರ್ ಜೆಪ್ಪು ಇವರ ಅಧ್ಯಕ್ಷತೆಯಲ್ಲಿ ಹನೀಫ್ ಉಳ್ಳಾಲ ನಿವಾಸದಲ್ಲಿ ಜರುಗಿತು.

ಕೆಸಿಎಫ್ ಪಲಜ್ ಸೆಕ್ಟರ್ ಅಧ್ಯಕ್ಷರಾದ ಸಿರಾಜುದ್ದೀನ್ ಮುಈನಿ ಉದ್ಘಾಟಿಸಿದರರು. ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಶಫೀಕ್ ಎಲಿಮಲೆ ಇವರು ವರದಿ ಮತ್ತು ಲೆಕ್ಕ ಪತ್ರ ಮಂಡಿಸಿದರು. ನಂತರ 2019 - 2021ನೇ ಸಾಲಿಗೆ ನೂತನ ಸಮಿತಿಯನ್ನು ರಚಿಸಲಾಯಿತು.

ಸೊಹಾರ್ ಸೆಕ್ಟರ್ ನೂತನ ಅಧ್ಯಕ್ಷರಾಗಿ ನಿಸಾರ್ ಜೆಪ್ಪು, ಪ್ರಧಾನ ಕಾರ್ಯದರ್ಶಿಯಾಗಿ ನಾಸಿರ್ ಕೊಪ್ಪ, ಕೋಶಾದಿಕಾರಿ ಹೈದರಾಲಿ ಬಂಟ್ವಾಳ, ಶಿಕ್ಷಣ ವಿಭಾಗದ ಅಧ್ಯಕ್ಷರಾಗಿ ಅಲಿ ಇಮಾಮಿ ಉಪ್ಪಳ, ಶಿಕ್ಷಣ ವಿಭಾಗದ ಕನ್ವೀನರ್ ರಝಾಕ್ ಪುತ್ತೂರು, ಸಾಂತ್ವನ ವಿಭಾಗದ ಅಧ್ಯಕ್ಷರಾಗಿ ಸೈಫುದ್ದೀನ್ ಕಾಟಿಪಳ್ಳ, ಕನ್ವೀನರ್ ರಫೀಕ್ ಕಕ್ಕಿಂಜೆ, ಪ್ರಕಾಶನ ವಿಭಾಗದ ಅಧ್ಯಕ್ಷರಾಗಿ ಸಮದ್ ಮುಕ್ಕ, ಕನ್ವೀನರ್ ಆಗಿ ಬಾತಿಶ ಸಹಮ್, ಎಕ್ಸಿಕ್ಯೂಟಿವ್ ಸದಸ್ಯರಾಗಿ ಮಹರೂಫ್ ಕೊಡಗು, ಸಂಶುದ್ದೀನ್ ಕಡಬ, ಸಿರಾಜುದ್ದೀನ್ ಬೊಲ್ಮಾರ್, ಪಾರೂಕ್ ಕೂರತ್, ಸಂಶೀರ್ ಕೊಡಗು, ಜಲೀಲ್ ಕರೊಪಾಡಿ ಇವರುಗಳನ್ನು ಆಯ್ಕೆ ಮಾಡಲಾಯಿತು .

ಕೆಸಿಎಫ್ ಒಮಾನ್ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಿದ್ದೀಕ್ ಮಾಂಬ್ಳಿ ಸುಳ್ಯ, ಸೊಹಾರ್ ಝೋನ್ ಕೊಶಾಧಿಕಾರಿ ಇಕ್ಬಾಲ್ ಎರ್ಮಾಲ್, ಸೊಹಾರ್ ಝೋನ್ ಅಧ್ಯಕ್ಷ ಆರಿಫ್ ಮದಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಕಾರ್ಯದರ್ಶಿ ಶಫೀಕ್ ಎಲಿಮಲೆ ಸ್ವಾಗತಿಸಿ, ಸೊಹಾರ್ ಝೋನ್ ಕಾರ್ಯದರ್ಶಿ ಅಶ್ರಫ್ ಕುತ್ತಾರ್ ಕಾರ್ಯಕ್ರಮ ನಿರೂಪಿಸಿ, ನೂತನ ಕಾರ್ಯದರ್ಶಿ ನಾಸಿರ್ ಕೊಪ್ಪ ವಂದಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)