varthabharthi

ಗಲ್ಫ್ ಸುದ್ದಿ

ದಮಾಮ್ ನಲ್ಲಿ ಕಬಡ್ಡಿ ಪಂದ್ಯಾಟ: ಕರಾವಳಿ ಫ್ರೆಂಡ್ಸ್ ಪ್ರಥಮ, ಕಲ್ಲಡ್ಕ ಅಬ್ರೋಡ್ ಫೋರಂ ದ್ವಿತೀಯ

ವಾರ್ತಾ ಭಾರತಿ : 26 Apr, 2019

ಜುಬೈಲ್: ಮಂಜೇಶ್ವರ ಪ್ರವಾಸಿ ಸಂಘಟನೆ ದಮಾಮ್ ನಲ್ಲಿ ‌ಆಯೋಜಿಸಿದ್ದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಕೂಟದಲ್ಲಿ‌ ಕರಾವಳಿ ಫ್ರೆಂಡ್ಸ್ ರಿಯಾದ್ ತಂಡ ಪ್ರಥಮ ಸ್ಥಾನ ಹಾಗು 50 ಸಾವಿರ ರೂ. ನಗದು ಬಹುಮಾನ ಪಡೆದುಕೊಂಡಿದೆ.

ಕಲ್ಲಡ್ಕ ಅಬ್ರೋಡ್ ಫೋರಂ (ಕೆಎಎಫ್) ದ್ವಿತೀಯ ಸ್ಥಾನ ಹಾಗು 20 ಸಾವಿರ ರೂ. ನಗದು ಪಡೆದುಕೊಂಡಿದೆ. ಪಂದ್ಯ ಶ್ರೇಷ್ಠ ಹಾಗು ಉತ್ತಮದಾಳಿಗಾರನಾಗಿ ಕರಾವಳಿ ಫ್ರೆಂಡ್ಸ್ ರಿಯಾದ್ ತಂಡದ ಮುಹಮ್ಮದ್ ಪಡೆದುಕೊಂಡರು. ಉತ್ತಮ ಹಿಡಿತಗಾರನಾಗಿ ಕಲ್ಲಡ್ಕ ಅಬ್ರೋಡ್ ಫೋರಂ ತಂಡದ ಜಾಬಿರ್ ಪಡೆದುಕೊಂಡರು.

ಕಲ್ಲಡ್ಕ ಅಬ್ರೋಡ್ ಫೋರಂ ತಂಡದಲ್ಲಿ ತಂಡದ ಕಪ್ತಾನ ಇಮ್ರಾನ್, ಶಬೀರ್ ಫೈರೋಝ್, ಇಸ್ಮಾಯಿಲ್, ಜಾಬಿರ್, ಆಸಿಫ್, ಅಕ್ಬರ್, ರಮೀಝ್, ಸಿದ್ದೀಕ್, ಅಶ್ರಫ್ ಹಾಗು ಟೀಮ್ ಮ್ಯಾನೇಜರ್ ಫಯಾಝ್ ಕಲ್ಲಡ್ಕ ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)