varthabharthi

ಗಲ್ಫ್ ಸುದ್ದಿ

ಕೆಸಿಎಫ್ ತಬೂಕ್ ಸೆಕ್ಟರ್: ಸ್ವಲಾತ್ ಮಜ್ಲಿಸ್ ಹಾಗೂ ಸನ್ಮಾನ ಕಾರ್ಯಕ್ರಮ

ವಾರ್ತಾ ಭಾರತಿ : 27 Apr, 2019

ಸೌದಿ ಅರೇಬಿಯ: ಕೆಸಿಎಫ್ ತಬೂಕ್ ಸೆಕ್ಟರ್ ಮಾಸಿಕ ಸ್ವಲಾತ್ ಮಜ್ಲಿಸ್ ಹಾಗೂ ಸನ್ಮಾನ ಕಾರ್ಯಕ್ರಮ ಗುರುವಾರ ತಬೂಕ್ ನ ಕೆಸಿಎಫ್ ಭವನದಲ್ಲಿ ನಡೆಯಿತು. ಇತ್ತೀಚೆಗೆ ಮದೀನಾ ಮುನವ್ವರದಲ್ಲಿ ನಡೆದ ಕೆಸಿಎಫ್ ಮದೀನಾ ಝೋನ್ ವಾರ್ಷಿಕ ಮಹಾ ಸಭೆಯಲ್ಲಿ ತಬೂಕ್ ಸೆಕ್ಟರ್ ನಾಯಕರಾದ ಹಮೀದ್ ಮುಸ್ಲಿಯಾರ್ ಕರಾಯ ಝೋನಲ್ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದು, ಅವರನ್ನು ತಬೂಕ್ ಸೆಕ್ಟರ್ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಇದೇ ಸಂದರ್ಭ ಝೋನಲ್ ಗೆ ಆಯ್ಕೆ ಯಾಗಿರುವ ಸೆಕ್ಟರ್ ನ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಝೋನಲ್ ಮುಖಾಂತರ ನ್ಯಾಷನಲ್ ಸಮಿತಿಗೆ ಆಯ್ಕೆಯಾದ ಸದಸ್ಯರನ್ನು ಕೂಡ ಅಭಿನಂದಿಸಲಾಯಿತು.

ಈ ವೇಳೆ ಸೆಕ್ಟರ್ ನ ನೇತಾರರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)