varthabharthi


ಗಲ್ಫ್ ಸುದ್ದಿ

ದುಬೈ: ಬದ್ರಿಯಾ ಫ್ರೆಂಡ್ಸ್ ದುಬೈ ಮತ್ತು ಬ್ಲಡ್ ಡೋನರ್ಸ್ ಮಂಗಳೂರು(ರಿ) ವತಿಯಿಂದ ರಕ್ತದಾನ ಶಿಬಿರ

ವಾರ್ತಾ ಭಾರತಿ : 28 Apr, 2019

ದುಬೈ: ಬದ್ರಿಯಾ ಫ್ರೆಂಡ್ಸ್ ದುಬೈ ಮತ್ತು ಬ್ಲಡ್ ಡೋನರ್ಸ್ ಮಂಗಳೂರು(ರಿ) ವತಿಯಿಂದ ಲತೀಫಾ ಆಸ್ಪತ್ರೆ ಬ್ಲಡ್ ಡೊನೇಷನ್ ಸೆಂಟರ್ ಹೂದ್ ಮೆಹ್ತಾ ದುಬೈಯಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯವಾಧಿ ಮುಝಫ್ಫರ್ ಅಹಮದ್ ವಹಿಸಿದ್ದರು. ನಂತರ ಮಾತನಾಡಿದ ಅವರು, ನಮ್ಮ ಜಿಲ್ಲೆಯಲ್ಲಿ ಇರುವಷ್ಟು ಸಮಾಜ ಸೇವೆ ಮಾಡುವ ಸಂಘಟನೆ ಬೇರೆ ಎಲ್ಲೂ ಕಾಣಲು ಸಾಧ್ಯವಿಲ್ಲ. ನಮ್ಮ ಸಮುದಾಯದಲ್ಲಿರುವ ಸಣ್ಣ ಮಟ್ಟದ ಭಿನ್ನಾಭಿಪ್ರಾಯಗಳನ್ನು ಬದಿಗೆ ಇಟ್ಟು ಸಮಾಜ ಸೇವೆಯಲ್ಲಿ ಮುಂದುವರಿದರೆ ವಿಶ್ವದಲ್ಲೇ ಒಂದು ಒಳ್ಳೆಯ ಸಮುದಾಯ ಬ್ಯಾರಿ ಸಮುದಾಯ ಆಗುದರಲ್ಲಿ ಯಾವುದೇ ಸಂಶಯವಿಲ್ಲ. ವಿದೇಶದಲ್ಲಿ ರಕ್ತದಾನದಂತಹ ಸಮಾಜ ಸೇವೆ ಮಾಡೋದು ಒಂದು ಸಂತೋಷದ ವಿಷಯ. 1982 ರ ಕಾಲಘಟ್ಟದಲ್ಲಿ ನಮ್ಮ ಸಮುದಾಯದ ಜನರು ರಕ್ತದಾನವನ್ನು ವಿರೋಧ ಮಾಡಿದಾಗ ಅದನ್ನು ಎದುರಿಸಿ ಮಸೀದಿಯ ಖತೀಬರು ಅದಕ್ಕೆ ಪ್ರೋತ್ಸಾಹ ಕೊಟ್ಟು ರಕ್ತದಾನದಲ್ಲಿ ಕ್ರಾಂತಿಯನ್ನು  ಸೃಷ್ಟಿಸಿದ ಒಂದು ಸಮುದಾಯವಿದ್ದರೆ ಅದು ಬ್ಯಾರಿ ಸಮುದಾಯ. ನಾವು ಬ್ಯಾರಿಗಳು ಅಂದರೆ ವ್ಯಾಪಾರಸ್ಥರು ಆದರೂ ನಾವು ಎಲ್ಲಾ ಕಾರ್ಯದಲ್ಲಿ ಮುಂದೆ ಪ್ರತ್ಯೇಕವಾಗಿ ವಿದೇಶಗಳಲ್ಲಿ ಕೂಡ ಇಂತ ಸಮಾಜ ಸೇವೆ ಮಾಡೋದು ಶ್ಲಾಘನೀಯ ಎಂದರು.

ಬ್ಯಾರಿಸ್ ಕಲ್ಚರಲ್ ಫೋರಂ ಯು.ಎ.ಇ ಇದರ ಉಪಾಧ್ಯಕ್ಷರು ಅಬ್ದುಲ್ ಲತೀಫ್ ಮುಲ್ಕಿ ಮಾತನಾಡುತ್ತಾ, ಬದ್ರಿಯ ಫ್ರೆಂಡ್ಸ್ ಮತ್ತು ಬ್ಲಡ್ ಡೋನರ್ಸ್ ಮಂಗಳೂರು(ರಿ) ಸತತ 6ನೇ ಬಾರಿ ಒಟ್ಟು ಸೇರಿ ಒಂದು ಅದ್ಬುತ ಕೆಲಸ ಮಾಡುತ್ತಾ ಇದ್ದಾರೆ. ಇವರಿಗೆ ಇನ್ನೂ ಮುಂದೆ ಕೂಡ ಇಂತಹ  ಕೆಲಸ ಮಾಡಿ ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡಲಿ ಎಂದು ಆಶಿಸಿದರು.

ಮುಹಮ್ಮದ್ ಶಾಫಿ ಮ್ಯಾನೇಜರ್ ಕರ್ನಾಟಕ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಯು.ಎ.ಇ ಮಾತನಾಡುತ್ತಾ, ಬದ್ರಿಯ ಫ್ರೆಂಡ್ಸ್ ಮತ್ತು ಬ್ಲಡ್ ಡೋನರ್ಸ್ ಮಂಗಳೂರು(ರಿ) ಮಾಡುವ ಕೆಲಸವನ್ನು ಮೆಚ್ಚಿ ಇನ್ನು ಮುಂದೆ ಕೂಡ ಇಂತ ಕೆಲಸ ಮಾಡಲಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಕ್ತರ್ ಹುಸೈನ್ ಟ್ರಷ್ಟಿ ಹಿದಾಯ ಫೌಂಡೇಶನ್ ಯುನೈಟೆಡ್ ಅರಬ್ ಎಮಿರೇಟ್ಸ್, ಅನ್ವರ್ ಸಾದತ್ ಬದ್ರಿಯ ಫ್ರೆಂಡ್ಸ್ ಕಾರ್ಯ ಕಾರಿಣಿ  ಮಂಡಳಿ ಮುಖ್ಯಸ್ಥ ರು ಯು.ಎ.ಇ. ಉಪಸ್ಥಿತರಿದ್ದರು.

ಬ್ಲಡ್ ಡೋನರ್ಸ್ ಮಂಗಳೂರು(ರಿ) ಇದರ ಯು.ಎ.ಇ ಇದರ ಕಾರ್ಯನಿರ್ವಾಹಕರಾದ ಶಂಶುದ್ದೀನ್ ಪಿಲಿಗೂಡು, ರಾಝಿಕ್ ‘ಡಿ' ವಿಟ್ಲ, ಬದ್ರಿಯ ಫ್ರೆಂಡ್ಸ್ ಯು.ಎ.ಇ ಪರವಾಗಿ ಮೊಹಮ್ಮದ್ ಇರ್ಷಾದ್ ಓರಿಯನ್, ಅಬ್ದುಲ್ ರಹಿಮಾನ್ ಪೊಯ್ಯಾಲ್ ಬಾಗವಹಿಸಿದ್ದರು.

ಈ ರಕ್ತದಾನ ಶಿಬಿರದಲ್ಲಿ 96 ರಕ್ತದಾನಿಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು. ರಕ್ತದಾನ ಮಾಡಿದ ಪ್ರತಿಯೊಬ್ಬರಿಗೂ ಬ್ಲಡ್ ಡೋನರ್ಸ್ ಮಂಗಳೂರು(ರಿ) ಮತ್ತು ಬದ್ರಿಯ ಫ್ರೆಂಡ್ಸ್ ಇದರ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ಕಾರ್ಯಕಮವನ್ನು ಮುಹಮ್ಮದ್ ಆಶಿಕ್ ಬಂದರ್ ನಿರೂಪಿಸಿದರು. ಬ್ಲಡ್ ಡೋನರ್ಸ್ ಮಂಗಳೂರು(ರಿ) ಇದರ ಯು.ಎ.ಇ.ಇದರ ಮುಖ್ಯ ಕಾರ್ಯನಿರ್ವಾಹಕ ನಝೀರ್ ಬಿಕರ್ನಕಟ್ಟೆ ವಂದಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)