varthabharthi

ನಿಮ್ಮ ಅಂಕಣ

ಪ್ರಧಾನಿ ನರೇಂದ್ರ ಮೋದಿ ಹಿಂದುಳಿದ ಜಾತಿಯವರೇ?

ವಾರ್ತಾ ಭಾರತಿ : 28 Apr, 2019
ಅನಿಲ್ ಕುಮಾರ್ ಪೂಜಾರಿ, ಶಿವಗಿರಿ, ಬೆಂಗಳೂರು

ಮಾನ್ಯರೇ,

ಪ್ರಧಾನಿ ಮೋದಿ ಉತ್ತರ ಭಾರತದಲ್ಲಿ ಚುನಾವಣಾ ಪ್ರಚಾರಕ್ಕೆ ಹೋದಲ್ಲೆಲ್ಲಾ ತಮ್ಮದು ಅತಿ ಹಿಂದುಳಿದ ಜಾತಿ ಎಂದು ಹೇಳುತ್ತಿದ್ದಾರೆ. ಆದರೆ ತಮ್ಮದು ಯಾವ ಜಾತಿ ಹಾಗೂ ಅದನ್ನು ಹಿಂದುಳಿದ ವರ್ಗದಲ್ಲಿ ಯಾವ ವರ್ಷದಿಂದ ಗುಜರಾತ್ ಸರಕಾರ ಸೇರಿಸಿತು ಎಂಬ ವಿಷಯವನ್ನು ಗುಟ್ಟಾಗಿಡುತ್ತಿದ್ದಾರೆ. ಮಾಯಾವತಿಯವರು ಪ್ರಧಾನಿ ಮೋದಿ ಹಿಂದುಳಿದ ವರ್ಗದವರಲ್ಲ ಅವರು ‘‘ನಕಲಿ ಒಬಿ
 
ಸಿ’’ ಎಂದು ಹೇಳಿರುವುದು ಮೋದಿಯನ್ನು ಪೀಕಲಾಟಕ್ಕೆ ಸಿಲುಕಿಸಿದೆ. ಅದಕ್ಕಾಗಿ ಅವರು ಮಾಯಾವತಿ ಜಾತಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಇದು ಮೋದಿಯವರ ಹತಾಶೆಗೆ ಸಾಕ್ಷಿ. ಸತ್ಯವೆಂಬುದು ಬೆಂಕಿಯಂತೆ ಒಂದಲ್ಲಾ ಒಂದು ದಿನ ಸುಳ್ಳಿನ ಕವಚವನ್ನು ಸುಟ್ಟು ಹೊರಬರಲೇಬೇಕು. 2001ರ ವರೆಗೆ ಮುಂದುವರಿದ ಜಾತಿಯವರು ಎಂದು ಪರಿಗಣಿಸಲಾಗಿದ್ದ ಬನಿಯಾ (ವೈಶ್ಯ) ಜಾತಿಯೊಳಗಿನ ‘ಮೋಧಗಾಂಚಿ’ ಎಂಬ ಉಪಜಾತಿಯನ್ನು ಪ್ರತ್ಯೇಕ ಮಾಡಿ ಅದನ್ನು ಮಾತ್ರ ಹಿಂದುಳಿದ ವರ್ಗಕ್ಕೆ ಸೇರಿಸಿದ್ದು ಸ್ವತಃ ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿ ಆಗಿದ್ದ ಸಂದರ್ಭ. ಇದಕ್ಕೂ ಮೊದಲು ಮೋಧಗಾಂಚಿ ಉಪಜಾತಿ ಮುಂದುವರಿದ ವೈಶ್ಯ ಜಾತಿ ಎಂದು ಅಧಿಕೃತವಾಗಿ ಪರಿಗಣಿತವಾಗಿತ್ತು. ನಿಜವಾಗಿ ಮೋದಿಯವರದ್ದು ಬನಿಯಾ (ವೈಶ್ಯಾ) ಜಾತಿಯೊಳಗೆ ಬರುವ ‘ಮೋಧಗಾಂಚಿ’ ಎಂಬ ಉಪಜಾತಿ. ಹಿಂದಿನ ಕಾಲದಲ್ಲಿ ಈ ಜಾತಿಯವರು ಕೇವಲ ಬೆಣ್ಣೆ ಮತ್ತು ತುಪ್ಪಮಾತ್ರ ಮಾರುತ್ತಿದ್ದರು. ಇವರು ಎಣ್ಣೆ ತಯಾರಿಸಿ ಮಾರುವ ಗಾಣಿಗ ಜಾತಿಯವರು ಅಲ್ಲವೇ ಅಲ್ಲ. ರೈತರಿಂದ ಬೆಣ್ಣೆ ಖರೀದಿಸಿ ಅದನ್ನು ತುಪ್ಪಮಾಡಿ ಮಾತ್ರ ಇವರು ಮಾರುತ್ತಿದ್ದರು. ಗುಜರಾತ್‌ನಲ್ಲಿ ಅಮೂಲ್ ಸಹಕಾರ ಸಂಸ್ಥೆ ಸ್ಥಾಪನೆಯಾಗುವುದಕ್ಕೆ ಮುಂಚೆ ಬೆಣ್ಣೆತುಪ್ಪಮಾರುವುದು ಈ ಮೋಧಗಾಂಚಿ ಜಾತಿಯವರದ್ದೇ ಏಕಸ್ವಾಮ್ಯವಾಗಿತ್ತು. ಅಮೂಲ್ ಬೆಣ್ಣೆತುಪ್ಪಬಂದ ಮೇಲೆ ಇವರ ಏಕಸ್ವಾಮ್ಯ ಮುರಿದು ಇವರು ಬೇರೆ ವ್ಯಾಪಾರದತ್ತ ಸರಿದಿದ್ದರು. ಈಗಲೂ ಈ ಜಾತಿಯವರೆಲ್ಲಾ ವ್ಯಾಪಾರಿಗಳೇ ಆಗಿದ್ದು ತುಂಬಾ ಶ್ರೀಮಂತರಾಗಿದ್ದಾರೆ. ಬಿಹಾರದ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿಯವರೂ ಇದೇ ಮೋಧಗಾಂಚಿ ವೈಶ್ಯ ಜಾತಿಯವರು. ಆದರೆ ಅವರು ತಮ್ಮ ಎಲ್ಲಾ ಅಧಿಕೃತ ದಾಖಲೆಗಳಲ್ಲಿ ತಮ್ಮನ್ನು ‘ರಾಜಸ್ಥಾನಿ ವೈಶ್ಯ’ ಎಂದು ಬರೆಯುತ್ತಾರೆಯೇ ವಿನಃ ತಾವು ಒಬಿ ಸಿ ಎಂದು ಎಲ್ಲಿಯೂ ಬರೆದಿಲ್ಲ. ಯಾರು ಬೇಕಾದರೂ ಇಂಟರ್‌ನೆಟ್‌ನಲ್ಲಿ ಸುಶೀಲ್ ಕುಮಾರ್ ಮೋದಿಯವರ ಅಧಿಕೃತ ವಿಕಿಪೀಡಿಯ ನೋಡಬಹುದು. ಅದೇ ಪ್ರಕಾರ ಮುಂಬೈಯಲ್ಲಿ ಹುಟ್ಟಿ ಬೆಳೆದಿರುವ ಗುಜರಾತ್ ಮೂಲದ ಬ್ಯಾಂಕ್ ವಂಚಕ ನೀರವ್ ಮೋದಿ ಮತ್ತು ಅವರ ಮಾವ ಮೆಹುಲ್ ಚೋಕ್ಸಿ ಕೂಡಾ ತಮ್ಮ ಅಧಿಕೃತ ದಾಖಲೆಗಳಲ್ಲಿ ತಾವು ಬನಿಯಾ ವೈಶ್ಯ ಜಾತಿ ಎಂದೇ ನಮೂದಿಸಿದ್ದಾರೆ. ಮುಂಬೈ ಪೊಲೀಸ್ ರೆಕಾರ್ಡ್‌ನಲ್ಲೂ ಇವರದ್ದು ಬನಿಯಾ ಜಾತಿ ಎಂದೇ ನಮೂದಿಸಲಾಗಿದೆ. ಒಂದು ವೇಳೆ ಒಬ್ಬ ಸಾಧಾರಣ ನಿರುದ್ಯೋಗಿ ನಕಲಿ ಒಬಿ
 ಸಿ ಪ್ರಮಾಣಪತ್ರ ಪಡೆದು ಸರಕಾರಿ ನೌಕರಿ ಪಡೆದಿದ್ದರೆ, ನಂತರ ಸತ್ಯ ಹೊರಬಂದ ತಕ್ಷಣ ಅವನು ಸರಕಾರಿ ಕೆಲಸದಿಂದ ವಜಾ ಆಗುತ್ತಾನೆ. ಆದರೆ ದೇಶದ ಪ್ರಧಾನಿಯೇ ನಕಲಿ ಜಾತಿ ಪ್ರಮಾಣಪತ್ರ ಹೊಂದಿದ್ದರೆ ಅದು ಮಾತ್ರ ಸರಿಯೇ? 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)