varthabharthi

ಗಲ್ಫ್ ಸುದ್ದಿ

ಕರ್ನಾಟಕ ಇಸ್ಲಾಮಿಕ್ ಸೆಂಟರ್ ಬುರೈದ ಸಮಿತಿಯ ಮಹಾಸಭೆ

ವಾರ್ತಾ ಭಾರತಿ : 1 May, 2019

ಬುರೈದ: ಕರ್ನಾಟಕ ಇಸ್ಲಾಮಿಕ್ ಸೆಂಟರ್ ಇದರ ಸೌದಿ ಅರೇಬಿಯಾ ಬುರೈದ ಸಮಿತಿಯ ಮಹಾಸಭೆಯು ಶಾಫಿ ಪೆರುವಾಯಿ ಅವರ ಅಧ್ಯಕ್ಷತೆಯಲ್ಲಿ ಕುಕ್ಕುವಳ್ಳಿ ಆರ್ಬೈನ್ ರೂಮಿನಲ್ಲಿ ಜರುಗಿತು.

ಶರೀಫ್ ಅಮಾನಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು, ಸ್ವಾಲಿ ಬೆಳ್ಳಾರೆ ಶುಭ ಹಾರೈಸಿದರು. ಈ ಸಂದರ್ಭ 2019-20 ಸಾಲಿನ ನೂತನ ಸಮಿತಿ ರಚಿಸಲಾಯಿತು.

ಅಧ್ಯಕ್ಷರಾಗಿ ಶಾಫಿ ಪೆರುವಾಯಿ , ಉಪಾಧ್ಯಕ್ಷರಾಗಿ ಹನೀಫ್ ಸಿಕೆ, ಪ್ರ. ಕಾರ್ಯದರ್ಶಿಯಾಗಿ ಜಲೀಲ್ ಕೇಕನಾಜೆ, ಕಾರ್ಯದರ್ಶಿಯಾಗಿ ಸಿರಾಜ್ ಮುಲ್ಕಿ ನಜಮ್, ಮುಹಮ್ಮದ್ ಕುಂಞಿ ಮೂಡಂಬೈಲ್, ಕೋಶಾಧಿಕಾರಿಯಾಗಿ ಝಕರಿಯ ಕೊರಿಂಗಿಲ, ಸಂಘಟನಾ ಕಾರ್ಯದರ್ಶಿಯಾಗಿ, ಪೈಝಲ್ ನಜಂ, ಸಂಚಾಲಕರಾಗಿ ಅಬ್ದುಲ್ ಖಾದರ್ ಕನ್ನಂಗಾರ್, ಸ್ವಾಲಿ ಬೆಳ್ಳಾರೆ, ಲೆಕ್ಕ ಪರಿಶೋಧಕರಾಗಿ ಸೈಯ್ಯದ್ ವೈಎಂಕೆ ಹಾಗೂ 33 ಸದಸ್ಯರನ್ನು ಒಳಗೊಂಡ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.

ಅಬ್ದುಲ್ ಖಾದರ್ ಕನ್ನಂಗಾರ್, ಅಬ್ಬಾಸ್ ಅಲಿ ಕುಕ್ಕುವಳ್ಳಿ, ರಝಾಕ್ ನೆಕ್ಕಿಲ್, ಹನೀಫ್, ತಾಜುದ್ದೀನ್ ಉಪ್ಪಿನಂಗಡಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.

ಝಕರಿಯ ಕೊರಿಂಗಿಲ ಸ್ವಾಗತಿಸಿದರು ಹಾಗೂ ವಂದಿಸಿದರು.ಲತೀಫ್ , ಸಂಶು ಸರಾವು, ಜಾಬಿರ್ ಕೇಕನಾಜೆ, ಇಸ್ಮಾಯೀಲ್ ಆನಡ್ಕ, ಜಲೀಲ್ ಕೇಕನಾಜೆ, ಸೈಯ್ಯದ್ , ಮುಹಮ್ಮದ್ ಕುಂಞಿ ಮೂಡಂಬೈಲ್ ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)