varthabharthi

ಮಾಹಿತಿ - ಮಾರ್ಗದರ್ಶನ

ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ವಾರ್ತಾ ಭಾರತಿ : 4 May, 2019

ವಿದ್ಯಾರ್ಥಿವೇತನ
(ಅರ್ಹತೆ ಆಧಾರಿತ):
ಬ್ರಿಟಿಷ್ ಕೌನ್ಸಿಲ್ ಜಿಆರ್‌ಇಟಿ ಎಜುಕೇಷನ್ ಫುಲ್ ಸ್ಕಾಲರ್‌ಶಿಪ್ಸ್, ಸೆಪ್ಟಂಬರ್ 2019

ವಿವರ: ಇಂಗ್ಲೆಂಡಿನಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಅಧ್ಯಯನ ನಡೆಸ ಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ಬ್ರಿಟಿಷ್ ಕೌನ್ಸಿಲ್ ಇಂಡಿಯಾ ನೀಡುವ ಸ್ಕಾಲರ್‌ಶಿಪ್. ಈ ಕಾರ್ಯಕ್ರಮದಡಿ 35 ಸ್ಕಾಲರ್‌ಶಿಪ್ ನೀಡಲಾಗುವುದು.
ಅರ್ಹತೆ: 12ನೇ ತರಗತಿ ಅಥವಾ ತತ್ಸಮಾನ ಅಥವಾ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ, ಇಂಗ್ಲೆಂಡಿನ ಮಾನ್ಯತೆ ಪಡೆದ ವಿವಿಯಲ್ಲಿ ಅರ್ಜಿ ಸಲ್ಲಿಸಬಯಸುವ ಭಾರತೀಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಆಯಾ ಕೋರ್ಸ್‌ಗಳ/ ವಿವಿಗಳ ಅರ್ಹತಾ ಮಾನದಂಡದಲ್ಲಿ ತಿಳಿಸಿರುವಂತೆ ಅಗತ್ಯವಿರುವ ಭಾಷಾ ಪ್ರಾವೀಣ್ಯತೆ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.
ನೆರವು: ಆಯ್ಕೆಯಾದ ಪದವಿ ಅಭ್ಯರ್ಥಿಗಳಿಗೆ ಬೋಧನಾ ಶುಲ್ಕ ಸಂಪೂರ್ಣ ಮನ್ನಾ ಮಾಡಲಾಗುವುದು. ಸ್ನಾತಕೋತ್ತರ ಪದವಿ ಅಭ್ಯರ್ಥಿಗಳಿಗೆ (ಎರಡು ವರ್ಷದ ಕೋರ್ಸ್‌ನ) ಮೊದಲ ವರ್ಷದ ಸಂಪೂರ್ಣ ಬೋಧನಾ ಶುಲ್ಕ ಮನ್ನಾ ಮಾಡಲಾಗುವುದು. ಅಥವಾ ಒಂದು ವರ್ಷದ ಕೋರ್ಸ್ ಆಗಿದ್ದರೆ ಆ ವರ್ಷದ ಬೋಧನಾ ಶುಲ್ಕ ಮನ್ನಾ ಮಾಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮೇ 15, 2019
ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/BCGE254

****************************

ವಿದ್ಯಾರ್ಥಿವೇತನ
(ಪ್ರತಿಭೆ ಆಧಾರಿತ):
ಫಿಸಿಕಲ್ ರಿಸರ್ಚ್ ಲ್ಯಾಬೊರೇಟರಿ ಎಸ್ಸೆ ಕಾಂಪಿಟೀಷನ್ ಫಾರ್ ಸ್ಕೂಲ್ ಸ್ಟೂಡೆಂಟ್ಸ್ 2019

ವಿವರ: ಭಾರತ ಸರಕಾರದ ಬಾಹ್ಯಾಕಾಶ ಇಲಾಖೆಯ ಅಧೀನದ ಫಿಸಿಕಲ್ ರಿಸರ್ಚ್ ಲ್ಯಾಬೊರೇಟರಿ ಭಾರತೀಯ ಶಾಲಾ ವಿದ್ಯಾರ್ಥಿಗಳಿಂದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ಸ್ಕಾಲರ್‌ಶಿಪ್ ಗೆಲ್ಲುವ ಅವಕಾಶಕ್ಕೆ ಅರ್ಜಿ ಆಹ್ವಾನಿಸಿದೆ. ಬಾಹ್ಯಾಕಾಶ ಪರಿಶೋಧನೆಗೆ ಸಂಬಂಧಿಸಿದ ವಿಷಯದಲ್ಲಿ ಪ್ರಬಂಧಗಳನ್ನು ಬರೆದು ಸಲ್ಲಿಸಬಹುದು.
ಅರ್ಹತೆ: 8ನೇ ತರಗತಿಯಿಂದ 10ನೇ ತರಗತಿ ಮತ್ತು 11ನೇ ತರಗತಿಯಿಂದ 12ನೇ ತರಗತಿ ಎಂಬ ಎರಡು ವಿಭಾಗಗಳಿವೆ. ವಿದ್ಯಾರ್ಥಿಗಳು ಸಂಬಂಧಿಸಿದ ವಿಭಾಗದಲ್ಲಿ ತಮ್ಮ ಪ್ರಬಂಧ ಸಲ್ಲಿಸಬಹುದು.
ನೆರವು: ಒಂದನೇ ವಿಭಾಗದಲ್ಲಿ 2 ಸಾವಿರದಿಂದ 20 ಸಾವಿರ ರೂ.ವರೆಗಿನ ಮೊತ್ತದ ಸ್ಕಾಲರ್‌ಶಿಪ್, ಅತ್ಯುತ್ತಮ ಪ್ರಬಂಧಗಳಿಗೆ 2,500 ರೂ.ನಿಂದ 25 ಸಾವಿರ ರೂ.ವರೆಗಿನ ಸ್ಕಾಲರ್‌ಶಿಪ್ ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮೇ 15, 2019
ಅರ್ಜಿ: ಇ-ಮೇಲ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/PRLES254
*************************

ವಿದ್ಯಾರ್ಥಿವೇತನ
(ಪ್ರತಿಭೆ ಆಧಾರಿತ):
 ಮರ್ಸಿಡಿಸ್ ಬೆಂಝ್ ಇನ್-ಕಾರ್ ಗೇಮಿಂಗ್ ಚಾಲೆಂಜ್ 2019

ವಿವರ: ಅಂತರ್‌ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ನಗದು ಪುರಸ್ಕಾರ ಪಡೆಯಲು ಡೈಮ್ಲರ್ ಎಜಿ ಸಂಸ್ಥೆಯು ಗೇಮ್ಸ್‌ಗಳನ್ನು ರಚಿಸುವವರು ಮತ್ತು ಉತ್ಸಾಹಿಗಳಿಂದ ಅರ್ಜಿ ಆಹ್ವಾನಿಸಿದೆ. ತಲ್ಲೀನಗೊಳಿಸುವ ಗೇಮ್ಸ್ ಗಳನ್ನು (ಕಾರ್, ಬಸ್ಸು ಮುಂತಾದ ಮೊಬೈಲ್ ಆ್ಯಪ್) ರಚಿಸುವ ಉದ್ದೇಶದ ಈ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ತೋರಿದವರನ್ನು ಅಂತರ್‌ರಾಷ್ಟ್ರೀಯ ವೇದಿಕೆಯಲ್ಲಿ ಗೌರವಿಸಲಾಗುವುದು.
ಅರ್ಹತೆ: 18 ವರ್ಷ ಮೇಲ್ಪಟ್ಟವರು, ಗುಂಪಾಗಿಯೂ(ಒಂದು ಗುಂಪಿನಲ್ಲಿ ಗರಿಷ್ಠ 5 ಜನ) ಭಾಗವಹಿಸಬಹುದು. ಗೇಮಿಂಗ್ ಹೊಸತನಗಾರರು, ವಿನ್ಯಾಸಗಾರರು, ಅಭಿವೃದ್ಧಿ ಗೊಳಿಸುವವರು, ವೃತ್ತಿಪರ ಗೇಮರ್‌ಗಳು, ಪ್ರಾರಂಭಿಕರು ಅರ್ಜಿ ಸಲ್ಲಿಸಬಹುದು.

ನೆರವು: ಆಯ್ಕೆಯಾದ ಪ್ರವೇಶಪತ್ರಗಳಿಗೆ 5000 ಗ್ರೇಟ್ ಬ್ರಿಟನ್ ಪೌಂಡ್ ನಗದು ಮತ್ತು ಇಎಸ್‌ಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಅವಕಾಶ ನೀಡಲಾಗುವುದು. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮೇ 16, 2019
ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/MBI1
********************

ವಿದ್ಯಾರ್ಥಿವೇತನ
(ಅರ್ಹತೆ ಆಧಾರಿತ):
ಗ್ರೀನ್ ಟ್ಯಾಲೆಂಟ್ಸ್ ಕಾಂಪಿಟೀಷನ್ 2019

ವಿವರ: ಜರ್ಮನ್ ಸರಕಾರದ ಶಿಕ್ಷಣ ಮತ್ತು ಸಂಶೋಧನಾ ಇಲಾಖೆಯು ಪರಿಸರ ಸಂರಕ್ಷಣೆ ವಿಭಾಗದಲ್ಲಿ ಕಾರ್ಯ ನಿರ್ವಹಿಸುವ ವಿಜ್ಞಾನಿಗಳಿಂದ ಈ ಸ್ಪರ್ಧೆಗೆ ತಮ್ಮ ಪ್ರಾಜೆಕ್ಟ್ ಕಲ್ಪನೆಗಳೊಂದಿಗೆ ಅರ್ಜಿ ಸಲ್ಲಿಸಲು ಆಹ್ವಾನಿಸಿದೆ. ವಿಜೇತರಿಗೆ ಸಂಶೋಧನೆ ನಡೆಸಲು ಆರ್ಥಿಕ ನೆರವು ಮತ್ತು ಪ್ರತಿಷ್ಠಿತ ವೇದಿಕೆಗಳಲ್ಲಿ ಜಾಗತಿಕ ವಿಜ್ಞಾನ ಸಂಸ್ಥೆಗಳೊಂದಿಗೆ ಬೆರೆಯುವ ಅವಕಾಶ ಒದಗಿಸಲಾಗುವುದು.
 ಅರ್ಹತೆ: ಸ್ನಾತಕೋತ್ತರ, ಡಾಕ್ಟೋರಲ್, ಪೋಸ್ಟ್ ಡಾಕ್ಟೋರಲ್ ಪದವಿ ಪಡೆದಿರುವ ಅಥವಾ ಪದವಿಯ ನಿರೀಕ್ಷೆಯಲ್ಲಿರುವ ಭಾರತೀಯರು ಅರ್ಜಿ ಸಲ್ಲಿಸಬಹುದು. 3 ವರ್ಷ ಅನುಭವ ಹೊಂದಿರುವ ಯುವ ವೃತ್ತಿಪರರೂ ಅರ್ಜಿ ಸಲ್ಲಿಸಬಹುದು.
ನೆರವು: ಆಯ್ಕೆಯಾದವರಿಗೆ, ಜರ್ಮನಿಯ ಸಂಸ್ಥೆಯೊಂದರಲ್ಲಿ 3 ತಿಂಗಳವರೆಗೆ ಸಂಶೋಧನಾ ಅಧ್ಯಯನದ ಸಂಪೂರ್ಣ ಮೊತ್ತ ಪಾವತಿಸಲಾಗುವುದು. ಅಲ್ಲದೆ 2 ವಾರಗಳ ಗ್ರೀನ್ ಟ್ಯಾಲೆಂಟ್ಸ್ ಸೈಯನ್ಸ್ ಫೋರಂ 2019ರಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು ಹಾಗೂ ಅವರ ಎಲ್ಲಾ ವೆಚ್ಚಗಳನ್ನೂ ಭರಿಸಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮೇ 22, 2019
ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/GTC3
*************

ವಿದ್ಯಾರ್ಥಿವೇತನ
(ಅಂತರ್‌ರಾಷ್ಟ್ರೀಯ ಮಟ್ಟ):
ಯೂನಿವರ್ಸಿಟಿ ಆಫ್ ಬರ್ಮಿಂಗ್‌ಹ್ಯಾಮ್ ಲಾ ಸ್ಕೂಲ್ ಸ್ಕಾಲರ್‌ಶಿಪ್ 2019

ವಿವರ: ಬ್ರಿಟನ್‌ನ ಬರ್ಮಿಂಗ್‌ಹ್ಯಾಮ್ ವಿವಿಯು ವಿವಿಯಲ್ಲಿ ಕಾನೂನು ಅಧ್ಯಯನ ನಡೆಸಲು ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ವಾರ್ಷಿಕ ಸ್ಕಾಲರ್‌ಶಿಪ್ ಹಾಗೂ ಇತರ ಸೌಲಭ್ಯ ಗಳನ್ನು ನೀಡಲಾಗುವುದು. ಉನ್ನತ ಅಧ್ಯಯನ ನಡೆಸಲು ಕಾನೂನು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸ್ಕಾಲರ್‌ಶಿಪ್ ನೀಡಲಾಗುವುದು.
ಅರ್ಹತೆ: 2019ರ ಸೆಪ್ಟಂಬರ್‌ನಲ್ಲಿ ಪ್ರಾರಂಭವಾಗುವ ಪೂರ್ಣಾವಧಿಯ ಕಾನೂನು ಪದವಿ ಕಾರ್ಯಕ್ರಮಕ್ಕೆ ಬರ್ಮಿಂಗ್‌ಹ್ಯಾಮ್ ವಿವಿಯಿಂದ ಪ್ರವೇಶ ಪತ್ರ ಪಡೆದಿರುವ ವಿದ್ಯಾರ್ಥಿಗಳು ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಬಹುದು.
ನೆರವು: ಆಯ್ಕೆಯಾದವರಿಗೆ ವಾರ್ಷಿಕ 3 ಸಾವಿರ ಗ್ರೇಟ್‌ಬ್ರಿಟನ್ ಪೌಂಡ್ ಮೊತ್ತದ ಸ್ಕಾಲರ್‌ಶಿಪ್ ನೀಡಲಾಗುವುದು. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮೇ 24, 2019
ಅರ್ಜಿ: ಇ-ಮೇಲ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/UOB13

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)