varthabharthiಗಲ್ಫ್ ಸುದ್ದಿ

ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿ ಮಹಾಸಭೆ

ವಾರ್ತಾ ಭಾರತಿ : 4 May, 2019

ಒಮಾನ್,ಮೇ 4: ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ಮಹಾಸಭೆಯು ಇತ್ತೀಚೆಗೆ ಅಲ್ ಫವಾನ್ ಆಡಿಟೋರಿಯಂ ಬರ್ಕದಲ್ಲಿ ನಡೆಯಿತು. 

ಕೆಸಿಎಫ್ ಒಮಾನ್ ರಾಷ್ಟ್ರೀಯ ಅಧ್ಯಕ್ಷ ಸಯ್ಯಿದ್ ಆಬಿದ್ ಅಲ್ ಹೈದ್ರೋಸಿ ತಂಙಳ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಸಯ್ಯಿದ್ ಇಲ್ಯಾಸ್ ಅಲ್ ಹೈದ್ರೋಸಿ ತಂಙಳ್ (ಎರುಮಾಡ್ ತಂಙಳ್) ಪ್ರಾರ್ಥನೆಯೊಂದಿಗೆ ಸಭೆಯನ್ನು ಉದ್ಘಾಟಿಸಿದರು. ಕಾರ್ಯದರ್ಶಿ ಹನೀಫ್ ಸಅದಿ ವರದಿ ಹಾಗೂ ಕಾಸಿಂ ಹಾಜಿ ಲೆಕ್ಕಪತ್ರ ಮಂಡನೆ ಮಾಡಿದರು.

ಸಭೆಯಲ್ಲಿ 2019-2021ರ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಅಯ್ಯೂಬ್ ಕೋಡಿ, ಪ್ರಧಾನ  ಕಾರ್ಯದರ್ಶಿಯಾಗಿ ಸ್ವಾದಿಖ್ ಸುಳ್ಯ, ಕೋಶಾಧಿಕಾರಿಯಾಗಿ ಆರಿಫ್ ಕೋಡಿ ನೇಮಕಗೊಂಡರರು. ಸಂಘಟನಾ ವಿಭಾಗದ ಅಧ್ಯಕ್ಷರಾಗಿ ಸಯ್ಯಿದ್ ಆಬಿದ್ ಅಲ್ ಹೈದ್ರೋಸಿ ತಂಙಳ್ ಎಮ್ಮೆಮಾಡು, ಕಾರ್ಯದರ್ಶಿಯಾಗಿ ಶಂಸುದ್ದೀನ್ ಪಾಲತಡ್ಕ, ಶಿಕ್ಷಣ ಇಲಾಖೆಯ ಅಧ್ಯಕ್ಷರಾಗಿ ಉಬೈದ್ ಸಖಾಫಿ ಮಿತ್ತೂರು 
ಕಾರ್ಯದರ್ಶಿಯಾಗಿ ಖಾಸಿಂ ಪೊಯ್ಯತ್ತಬೈಲ್, ಸಾಂತ್ವನ ಇಲಾಖೆಯ ಅಧ್ಯಕ್ಷರಾಗಿ ಇಬ್ರಾಹಿಂ ಹಾಜಿ ಅತ್ರಾಡಿ, ಕಾರ್ಯದರ್ಶಿಯಾಗಿ ಇಕ್ಬಾಲ್ ಎರ್ಮಾಳ್, ಪ್ರಕಾಶನ ಇಲಾಖೆಯ ಅಧ್ಯಕ್ಷರಾಗಿ ಸಮೀರ್ ಉಸ್ತಾದ್ ಹೂಡೆ, ಕಾರ್ಯದರ್ಶಿಯಾಗಿ ಅಶ್ರಫ್ ಭಾರತ್ ಸುಳ್ಯ, ಆಡಳಿತ ಇಲಾಖೆಯ ಅಧ್ಯಕ್ಷರಾಗಿ ಖಾಸಿಂಹಾಜಿ ಅಳಕೆಮಜಲು, ಕಾರ್ಯದರ್ಶಿಯಾಗಿ ಸಿದ್ದೀಕ್ ಮಾಂಬ್ಳಿ ಸುಳ್ಯ, ಇಹ್ಸಾನ್ ಇಲಾಖೆ ಅಧ್ಯಕ್ಷರಾಗಿ ಹಂಝ ಹಾಜಿ ಕನ್ನಂಗಾರ್, ಕಾರ್ಯದರ್ಶಿಯಾಗಿ ಇರ್ಫಾನ್ ಕೂರ್ನಡ್ಕ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಉಮರ್ ಸಖಾಫಿ ಮಿತ್ತೂರು, ಇಕ್ಬಾಲ್ ಬರ್ಕ, ಹನೀಫ್ ಸಅದಿ ಕುಡ್ತಮುಗೇರು, ಅಬ್ಬಾಸ್ ಮರಕಡ, ನವಾಝ್ ಮಣಿಪುರ, ಹನೀಫ್ ಮನ್ನಾಪು, ಜಸೀಮ್ ಕೊಪ್ಪ, ಸ್ವಾದಿಕ್ ಕಾಟಿಪಳ್ಳ, ಖಲಂದರ್ ಬಾಷಾ ತೀರ್ಥ ಹಳ್ಳಿ, ಮಜೀದ್ ಅಮಾನಿ, ಅಬ್ದುಲ್ ಲತೀಫ್ ಸುಳ್ಯ, ಕಾದರ್ ಹೆಚ್.ಕಲ್ಲು ಅವರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಹನೀಫ್ ಸಅದಿ ಸ್ವಾಗತಿಸಿ, ಸ್ವಾದಿಕ್ ಸುಳ್ಯ ಧನ್ಯವಾದ ಅರ್ಪಿಸಿದರು. ವೀಕ್ಷಕರಾಗಿ ಆಗಮಿಸಿದ ಕೆಸಿಎಫ್ ಖತರ್ ಅಧ್ಯಕ್ಷ ರಹೀಮ್ ಸಅದಿ, ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಆಡಳಿತ ವಿಭಾಗದ ಅಧ್ಯಕ್ಷ ಉಮರ್ ಸಖಾಪಿ ಮಿತ್ತೂರು, ಸಂಘಟನಾ ಕಾರ್ಯದರ್ಶಿ ಇಕ್ಬಾಲ್ ಬರ್ಕ ಒಮಾನ್ ಹಾಗೂ ರಾಷ್ಟ್ರೀಯ ಸಮಿತಿ ನಾಯಕರು ಮತ್ತು ಕೌನ್ಸಿಲರ್ ಗಳು ಸಭೆಯಲ್ಲಿ ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)