varthabharthi

ನಿಮ್ಮ ಅಂಕಣ

ಕಳಪೆ ಶೈಕ್ಷಣಿಕ ಸಾಧನೆಗೆ ಕಾರಣರ್ಯಾರು?

ವಾರ್ತಾ ಭಾರತಿ : 6 May, 2019
ವಿಠಲ ಆರ್.ಯಂಕಂಚಿ ಬಮ್ಮನಜೋಗಿ

ಮಾನ್ಯರೇ,

ಕರ್ನಾಟಕದಲ್ಲಿ ಪಂಚನದಿಗಳ ನಾಡು ಎಂದು ಹೆಸರುವಾಸಿಯಾಗಿರುವ ವಿಜಯಪುರ ಜಿಲ್ಲೆ ಶಿಕ್ಷಣದಲ್ಲಿ ಕಳಪೆ ಸ್ಥಾನವನ್ನು ಹೊಂದುತ್ತಿರುವುದು ನೋವಿನ ವಿಷಯವಾಗಿದೆ. ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಜಿಲ್ಲೆಯ ಮಕ್ಕಳು ಸಹ ಎಲ್ಲ ರಂಗದಲ್ಲಿಯೂ ಪೈಪೋಟಿಯಲ್ಲಿ ತೊಡಗಿರುತ್ತಾರೆ. ಆದರೆ ಆರ್ಥಿಕ ಸಮಸ್ಯೆಯಿಂದ ಶಾಲಾ ಹಂತ ಮುಗಿದ ಕೂಡಲೇ ಕಾಲೇಜುಗಳಿಗೆ ಕಳಿಸದೆ ದುಡಿಯಲು ನೂಕುತ್ತಿರುವುದು ನಮ್ಮ ಭಾಗದ ದುರ್ದೈವದ ಸಂಗತಿಯಾಗಿದೆ.ಇರುವ ಅಲ್ಪ ಸ್ವಲ್ಪ ಜಮೀನಿನಲ್ಲಿ ಏನಾದರೂ ಬೆಳೆಯಬೇಕೆಂದರೆ ನೀರಾವರಿಯಿಲ್ಲ. ಹೀಗಾಗಿ ಮಕ್ಕಳನ್ನೇ ಆಸ್ತಿಯನ್ನಾಗಿಸಿ ಅವರನ್ನು ದುಡಿತಕ್ಕೆ ಬೇರೆ ಬೇರೆ ರಾಜ್ಯಗಳಿಗೆ ತಳ್ಳುತ್ತಿದ್ದಾರೆ. ಹೀಗಾಗಿ ಲೇಖನಿ ಹಿಡಿಯುವ ಕೈಗಳು ಹಾರೆ ಪಿಕ್ಕಾಸಿ ಹಿಡಿಯಬೇಕಾದ ಸ್ಥಿತಿ ಬಂದಿದೆ.

 ಕೆಲವು ಪೋಷಕರು ತಮ್ಮ ಮಕ್ಕಳಿಗೆ ಕಷ್ಟಪಟ್ಟಾದರೂ ಶಿಕ್ಷಣ ಒದಗಿಸಲು ಮನಮಾಡಿದರೂ ವಿದ್ಯಾ ಸಂಸ್ಥೆಗಳ ದುಬಾರಿ ಶುಲ್ಕಗಳಿಂದಾಗಿ ಅವರ ಕನಸುಗಳು ಈಡೇರುತ್ತಿಲ್ಲ. ಅಲ್ಲದೆ ಕೊಠಡಿಗಳ ಸಮಸ್ಯೆ, ಪ್ರತ್ಯೇಕ ಶೌಚಾಲಯಗಳ ವ್ಯವಸ್ಥೆಯಿಲ್ಲದಿರುವುದು, ತರಗತಿಯಲ್ಲಿ ಶಿಕ್ಷಕರ ಸಮಸ್ಯೆಯೂ ಹಳ್ಳಿಗಳ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದಿರಲು ಕಾರಣವಾಗಿದೆ. ಜಿಲ್ಲೆಯ ಈ ಶೈಕ್ಷಣಿಕ ಕುಂಠಿತ ಸಮಸ್ಯೆಗೆ ಸಂಬಂಧಿಸಿದ ಯಾವುದೇ ಅಧಿಕಾರಿಗಳು ಗಮನಹರಿಸದಿರುವುದು ನೋವಿನ ಸಂಗತಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)