ಎಲ್.ಎಲ್.ರಝಾಕ್
ಕುಂದಾಪುರ, ಮೇ 8: ಕುಂದಾಪುರ ಸಾರ್ವಜನಿಕ ಗ್ರಂಥಾಲಯದ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಎಲ್.ಎಲ್. ರಝಾಕ್ ಎಂದೇ ಜನಜನಿತರಾಗಿದ್ದ ಶೇಕ್ ಮಹ್ಮದ್ ರಝಾಕ್(82) ಅಲ್ಪಕಾಲದ ಅಸೌಖ್ಯ ದಿಂದ ಬುಧವಾರ ಅಪರಾಹ್ನ ಕುಂದಾಪುರ ಬಹಾದ್ದೂರ್ ಷಾ ರಸ್ತೆಯಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಸಾಮಾಜಿಕ ಜಾಲತಾಣಗಳು ಲ್ಯವಿಲ್ಲದ ಕಾಲದಲ್ಲಿ ಸಾರ್ವಜನಿಕರ ಅಗತ್ಯಗಳಲ್ಲೊಂದಾದ ಗ್ರಂಥಾಲಯದ ಮೂಲಕ ಸಾರ್ವಜನಿಕರೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದ ರಝಾಕ್, ಪತ್ನಿ , ಮೂವರು ಪುತ್ರಿಯರು ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
Next Story