varthabharthi

ನಿಮ್ಮ ಅಂಕಣ

ಬೆಳೆ ಪರಿಹಾರ ಸಿಗಲಿ

ವಾರ್ತಾ ಭಾರತಿ : 8 May, 2019
-ಪರಮೇಶ್ವರ ಬಿ. ಬಿರಾದಾರ ನಾರಾಯಣಪುರ

ಮಾನ್ಯರೇ,

ಕಳೆದ ವರ್ಷ ಮುಂಗಾರು ಮತ್ತು ಹಿಂಗಾರು ಮಳೆ ಕೊರತೆಯಿಂದ ಬೆಳೆ ಕಳೆದುಕೊಂಡ ಬೀದರ್‌ಜಿಲ್ಲೆಯ ಔರಾದ್(ಬಾ), ಹುಮನಾಬಾದ್, ಭಾಲ್ಕಿ, ಬಸವಕಲ್ಯಾಣ ತಾಲೂಕಿನ ರೈತರಿಗೆ ಸರಕಾರ ನೀಡಬೇಕಾಗಿರುವ ಸುಮಾರು 141.62 ಕೋಟಿ ರೂ. ಬರ ಪರಿಹಾರ ಇಂದಿಗೂ ಸಿಗದಿರುವುದರಿಂದ ಜಿಲ್ಲೆಯಲ್ಲಿ ತೀವ್ರ ಸಂಕಷ್ಟಕ್ಕೆ ಕಾರಣವಾಗಿದೆ.

ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕಡಿಮೆಯಾಗಿ ಸಂಕಷ್ಟಕ್ಕೆ ಈಡಾಗುತ್ತಿದ್ದರೂ, ಕಳೆದ ಮುಂಗಾರು ಬೆಳೆ ಹಾನಿ ಸಂಭವಿಸಿ 8 ತಿಂಗಳಾದರೂ ಸರಕಾರ ಮಾತ್ರ ಅನ್ನದಾತನ ನೋವಿಗೆ ಸ್ಪಂದಿಸದಿರುವುದು ವಿಪರ್ಯಾಸವೆನಿಸುತ್ತಿದೆ.

ಮುಂಗಾರು ಹಾಗೂ ಹಿಂಗಾರು ಬೆಳೆಗಳಿಗೆ ಜಿಲ್ಲೆಯ ರೈತರು ಬೆಳೆ ವಿಮೆ ಮಾಡಿಸಿದ್ದಾರೆ, ಬೆಳೆ ಹಾನಿ ಸಂಭವಿಸಿದ್ದರ ಬಗ್ಗೆ ಸರ್ವೇ ಕಾರ್ಯ ಮಾಡಲಾಗಿದ್ದರೂ ಇಂದಿಗೂ ಬೆಳೆವಿಮೆಯ ಮೊತ್ತ ಅನ್ನದಾತರ ಖಾತೆಗಳಿಗೆ ಬಂದಿಲ್ಲ, ವಿಮಾ ಕಂಪೆನಿಗಳಿಗೆ ವಿಮೆ ಕಟ್ಟಿಸಿಕೊಳ್ಳುವಾಗ ಇರುವ ಕಾಳಜಿ, ರೈತರಿಗೆ ಪಾವತಿಸುವಾಗ ಇರುವುದಿಲ್ಲ. ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಅನ್ನದಾತರ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂಬುದಕ್ಕೆ ಬರ ಪರಿಹಾರದ ಹಣ ಬಾರದಿರುವುದೇ ಸಾಕ್ಷಿಯಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)