varthabharthi

ನಿಧನ

ಇಪಿಕೆ ನಾಯರ್

ವಾರ್ತಾ ಭಾರತಿ : 9 May, 2019

ಪುತ್ತೂರು: ಸಿವಿಲ್ ಗುತ್ತಿಗೆದಾರ ಪುತ್ತೂರು ನಗರದ ಕಲ್ಲಾರೆ ನಿವಾಸಿ ಇ.ಪಿ.ಕೆ. ನಾಯರ್(82) ಗುರುವಾರ ಅಲ್ಪಕಾಲದ ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನಹೊಂದಿದರು. 

ನಾಯರ್ ಮೂಲತಃ ಕೇರಳದವರು. 60ವರ್ಷಗಳ ಹಿಂದೆ ತಮ್ಮ ಊರಿನಿಂದ ಪುತ್ತೂರಿಗೆ ಆಗಮಿಸಿ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ಆರಂಭಿಸಿದ್ದರು. ತದ ನಂತರದ ದಿನಗಳಲ್ಲಿ ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರರಾಗಿ ಕಾಮಗಾರಿ ನಡೆಸುತ್ತಿದ್ದರು. ಕ್ಲಾಸ್ 1 ಗುತ್ತಿಗೆದಾರರಾಗಿರುವ ನಾಯರ್ ದ.ಕ.ಜಿಲ್ಲೆಯ ಬಹುತೇಕ ಸರಕಾರಿ ಕಟ್ಟಡಗಳ ನಿರ್ಮಾಣ ಗುತ್ತಿಗೆ ವಹಿಸಿದ್ದರು. ಮಂಗಳೂರಿನ ಲೋಕೋಪಯೋಗಿ ಕಟ್ಟಡ, ಪುತ್ತೂರು ಮಿನಿ ವಿಧಾನಸೌಧ, ಪುತ್ತೂರು ಪತ್ರಿಕಾ ಭವನ, ವಿವೇಕಾನಂದ ಶಿಕ್ಷಣ ಸಂಸ್ಥೆಗಳ ಕಟ್ಟಡಗಳು, ಪುತ್ತೂರಿನ ಖಾಸಗಿ ವಾಣಿಜ್ಯ ಕಟ್ಟಡಗಳ ನಿರ್ಮಾಣ ಗುತ್ತಿಗೆಯನ್ನು ನಿರ್ವಹಿಸಿದ್ದರು. ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಸಭಾಭವನದ ನಿರ್ಮಾಣ ಗುತ್ತಿಗೆಯನ್ನು ನಿರ್ವಹಿಸಿದ್ದರು. 

ಮೃತರು ಪುತ್ರ ಪ್ರಸಿದ್ಧ ಸಿವಿಲ್ ಗುತ್ತಿಗೆದಾರ ಸೂರಜ್ ನಾಯರ್ ಮತ್ತು ಪುತ್ರಿಯನ್ನು ಅಗಲಿದ್ದಾರೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)