varthabharthi

ಗಲ್ಫ್ ಸುದ್ದಿ

ಕೆಸಿಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಅಧ್ಯಕ್ಷರಾಗಿ ಡಿಪಿ ಬೈತಾರ್ ಸಖಾಫಿ ಪುನರಾಯ್ಕೆ

ವಾರ್ತಾ ಭಾರತಿ : 10 May, 2019

ರಿಯಾದ್ : ಕೆಸಿಎಫ್ ಸೌದಿ ರಾಷ್ಟ್ರೀಯ  ಸಮಿತಿ ಮಹಾಸಭೆಯು ರಿಯಾದ್ ನ ಅಪೋಲೋ ಧಿಮೋರ್ ಹೋಟೆಲ್ ನಲ್ಲಿ ಇತ್ತೀಚೆಗೆ ನಡೆಯಿತು. ಝೋನ್ ಗಳಿಂದ ಆಯ್ಕೆಯಾದ ರಾಷ್ಟೀಯ ಸಮಿತಿ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದರು.

ಸಭೆಯ ಅಧ್ಯಕ್ಷತೆಯನ್ನು ಸೌದಿ ರಾಷ್ಟೀಯ ಸಮಿತಿಯ ಅಧ್ಯಕ್ಷ ಮೌಲಾನಾ ಯೂಸುಫ್ ಸಖಾಫಿ ಬೈತಾರ್ ವಹಿಸಿದರು. ರಾಷ್ಟೀಯ ಸಮಿತಿಯ ಸಂಘಟನಾ ವಿಭಾಗದ ಅಧ್ಯಕ್ಷ ಸಿದ್ದಿಕ್ ಸಖಾಫಿ ಪೆರುವಾಯಿ  ಸ್ವಾಗತಿಸಿದರು.

ಕಾರ್ಯಕ್ರಮವನ್ನು ಐಸಿಎಫ್ ಸೌದಿ ರಾಷ್ಟೀಯ ಸಮಿತಿಯ ಕಾರ್ಯದರ್ಶಿ ಅಬ್ದುಲ್ ಸಲಾಂ ವಡಗರ ಉದ್ಘಾಟಿಸಿದರು. ಸಭೆಯಲ್ಲಿ ಕಳೆದ ವಾರ್ಷಿಕ ಸಾಲಿನ ವರದಿಯನ್ನು ರಾಷ್ಟೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಫಾರೂಕ್ ಕಾಟಿಪಳ್ಳ ಮತ್ತು ಲೆಕ್ಕ ಪಾತ್ರವನ್ನು ರಾಷ್ಟೀಯ ಸಮಿತಿಯ ಫೈನಾನ್ಸ್ ಸೆಕ್ರೆಟರಿ ಹಿದಾಯತ್ ತೀರ್ಥಹಳ್ಳಿ ವಾಚಿಸಿದರು.

ಕೆಸಿಎಫ್ ಅಂತಾರಾಷ್ಟ್ರೀಯ ಪದಾಧಿಕಾರಿಗಳಾದ ಎನ್ಎಸ್  ಅಬ್ದುಲ್ಲಾ ಮಂಜನಾಡಿ, ಪಿಪಿ ಹಾಜಿ ನಝೀರ್ ಕಾಶಿಪಟ್ನ, ಕಮರುದ್ದೀನ್ ಗೂಡಿನಬಳಿ ಹಾಜರಿದ್ದರು. ಮಹಾಸಭೆಗೆ ಕೆಸಿಎಫ್ ಅಂತಾರಾಷ್ಟ್ರೀಯ ಪ್ರತಿನಿಧಿಯಾಗಿ ಸಿದ್ದಿಕ್ ಮೊಂಟುಗೊಳಿ ಆಗಮಿಸಿದ್ದರು.

ಮುಖ್ಯ ಚುನಾವಣಾ ಅಧಿಕಾರಿಯಾಗಿ ಆಗಮಿಸಿದ ಸಿದ್ದಿಕ್ ಮೊಂಟುಗೋಳಿ ಅವರು ಹಳೆಯ ಸಮಿತಿಯನ್ನು ವಿಸರ್ಜಿಸಿ ಹೊಸ ಸಮಿತಿಯನ್ನು ರಚಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ರಾಷ್ಟೀಯ ಸಮಿತಿಯ ನೂತನ ಪ್ರಧಾನ ಕಾರ್ಯದರ್ಶಿ ಸಾಲಿ ಬೆಳ್ಳಾರೆ ವಂದಿಸಿದರು.

ನೂತನ ಪದಾಧಿಕಾರಿಗಳು:

ಅಧ್ಯಕ್ಷರಾಗಿ ಡಿಪಿ ಯೂಸುಫ್ ಸಖಾಫಿ ಬೈತಾರ್, ಪ್ರಧಾನ ಕಾರ್ಯದರ್ಶಿಯಾಗಿ ಸಾಲಿ ಬೆಳ್ಳಾರೆ, ಕೋಶಾಧಿಕಾರಿ : ಮೊಹಮ್ಮದ್ ಕಲ್ಲಾರ್ಬೆ ಸಂಘಟನಾ ಇಲಾಖೆಯ ಅಧ್ಯಕ್ಷರು : ಫೈಝಲ್ ಕೃಷ್ಣಾಪುರ , ಕಾರ್ಯದರ್ಶಿ : ಬಷೀರ್ ತಲಪಾಡಿ , ಶಿಕ್ಷಣ ಇಲಾಖೆಯ ಅಧ್ಯಕ್ಷರು : ಸಿದ್ದಿಕ್ ಸಖಾಫಿ ಪೆರುವಾಯಿ, ಕಾರ್ಯದರ್ಶಿ : ಯಾಹಿಯಾ ಬಿಳಿಯೂರ್ , ಸಾಂತ್ವನ ಇಲಾಖೆಯ ಅಧ್ಯಕ್ಷರು : ಮೊಹಮ್ಮದ್ ಮಲೆಬೆಟ್ಟು, ಕಾರ್ಯದರ್ಶಿ : ಅಶ್ರಫ್ ಕಿನ್ಯ , ಮದೀನಾ ಪ್ರಕಾಶನ ಇಲಾಖೆಯ ಅಧ್ಯಕ್ಷರು : ಹಿದಾಯತ್ ತೀರ್ಥಹಳ್ಳಿ , ಕಾರ್ಯದರ್ಶಿ : ಅಶ್ರು ಬಜ್ಪೆ , ಆಡಳಿತ ಇಲಾಖೆಯ ಅಧ್ಯಕ್ಷರು : ಅಬ್ದುಲ್ ಸಲಾಂ ಎನ್ಮೂರು, ಕಾರ್ಯದರ್ಶಿ : ಇಸ್ಮಾಯಿಲ್ ಮೊಂಟೆಪದವು, ಇಹ್ ಸಾನ್  ಇಲಾಖೆ ಅಧ್ಯಕ್ಷರು : ಜಿ. ಎಂ. ಹನೀಫಿ , ಜಿದ್ದಾ, ಕಾರ್ಯದರ್ಶಿ : ಹಂಝ ಮೈಂದಲ, ಕಾರ್ಯಕಾರಿ ಸಮಿತಿ ಸದಸ್ಯರು : ಎನ್ ಎಸ್ ಅಬ್ದುಲ್ಲಾ , ಕಮರುದ್ದೀನ್ ಗೂಡಿನಬಳಿ , ರಾಯಿಸ್ಕೋ ಅಬೂಬಕ್ಕರ್ , ನಝೀರ್ ಕಾಶಿಪಟ್ನ , ಫಾರೂಕ್ ಕಾಟಿಪಳ್ಳ , ಇಕ್ಬಾಲ್ ಕೈರಂಗಳ , ಇಸ್ಮಾಯಿಲ್ ಕಣ್ಣಂಗಾರ್ , ಉಮರ್ ಅಳಕೆಮಜಲು , ಮುಸ್ತಾಫಾ ಹಾಸನ , ಸಿದ್ದಿಕ್ ಬಾಳೆಹೊನ್ನೂರ್ , ತಾಜುದ್ದೀನ್ ಸುಳ್ಯ, ಅಸೀಫ್ ಗೂಡಿನಬಳಿ , ಹನೀಫ್ ಕಣ್ಣೂರ್ ಆಯ್ಕೆಯಾಗಿದ್ದಾರೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)