varthabharthiಮಾಹಿತಿ - ಮಾರ್ಗದರ್ಶನ

ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ವಾರ್ತಾ ಭಾರತಿ : 11 May, 2019

ವಿದ್ಯಾರ್ಥಿವೇತನ
(ಸಂಶೋಧನಾ ಮಟ್ಟ):
ಎಸ್‌ಇಆರ್‌ಬಿ ನ್ಯಾಷನಲ್ ಪೋಸ್ಟ್ ಡಾಕ್ಟೋರಲ್ ಫೆಲೊಶಿಪ್(ಎನ್-ಪಿಡಿಎಫ್) 2019

ವಿವರ:  ಭಾರತ ಸರಕಾರದ ಸೈಯನ್ಸ್ ಆ್ಯಂಡ್ ಇಂಜಿನಿಯರಿಂಗ್ ರಿಸರ್ಚ್ ಬೋರ್ಡ್ (ಎಸ್‌ಇಆರ್‌ಬಿ) ವಿಜ್ಞಾನ ಮತ್ತು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಪೋಸ್ಟ್ ಡಾಕ್ಟೋರಲ್ ಸಂಶೋಧನೆ ನಡೆಸಲು ಯುವ ಸಂಶೋಧಕರಿಗೆ ಆರ್ಥಿಕ ನೆರವು ನೀಡುತ್ತದೆ.

 ಅರ್ಹತೆ: ಪಿಎಚ್‌ಡಿ/ಎಂಎಸ್/ಎಂಡಿ ಪದವೀಧರರಾದ, ಪೋಸ್ಟ್ ಡಾಕ್ಟೋರಲ್ ರಿಸರ್ಚ್ ನಡೆಸಲು ಆಸಕ್ತಿ ಇರುವ ಭಾರತೀಯ ಪೌರರು ಈ ಫೆಲೋಶಿಪ್‌ಗೆ ಅರ್ಜಿ ಸಲ್ಲಿಸಬಹುದು. ಪಿಎಚ್‌ಡಿ ಪ್ರಬಂಧ ಸಲ್ಲಿಸಿ ಪಿಎಚ್‌ಡಿ ಪದವಿಯ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. 35 ವರ್ಷದೊಳಗಿರಬೇಕು. ಮಹಿಳೆಯರಿಗೆ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ. ನೆರವು: ಅರ್ಹ ಅಭ್ಯರ್ಥಿಗಳಿಗೆ ಮಾಸಿಕ 55,000 ರೂ. ಸ್ಟೈಪೆಂಡ್ ನೀಡಲಾಗುವುದು. ಪದವಿಯ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳಿಗೆ ಸಂಶೋಧನಾ ಅವಧಿಯಲ್ಲಿ 35,000 ರೂ. ಮಾಸಿಕ ಸ್ಟೈಪೆಂಡ್ ನೀಡಲಾಗುವುದು. ಆಯ್ಕೆಯಾದ ಎಲ್ಲಾ ಸಂಶೋಧನಾ ಅಭ್ಯರ್ಥಿಗಳಿಗೆ ವಾರ್ಷಿಕ 2 ಲಕ್ಷ ರೂ. ಸಂಶೋಧನಾ ಅನುದಾನ ಹಾಗೂ ವಾರ್ಷಿಕ 1 ಲಕ್ಷ ರೂ. ಸಾದಿಲ್ವಾರು ಅನುದಾನ ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮೇ 30, 2019
ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/SNPDF290

*********************
ವಿದ್ಯಾರ್ಥಿವೇತನ
(ಆದಾಯ ಮತ್ತು ಅರ್ಹತೆ ಆಧಾರಿತ):
ಕೈಂಡ್ ಸ್ಕಾಲರ್‌ಶಿಪ್ ಫಾರ್ ಯಂಗ್ ವುಮೆನ್

ವಿವರ: 9 ಮತ್ತು ಹೆಚ್ಚಿನ ತರಗತಿಯ ವಿದ್ಯಾರ್ಥಿನಿಯರಿಗೆ (ವಿದ್ಯಾಭ್ಯಾಸ ಮುಂದುವರಿಸಲು ಆರ್ಥಿಕ ಸಮಸ್ಯೆ ಇರುವ) ಬಡ್ಡಿ4ಸ್ಟಡಿ ಇಂಡಿಯಾ ಫೌಂಡೇಶನ್ ನೀಡುವ ಸ್ಕಾಲರ್‌ಶಿಪ್. ಈ ಯೋಜನೆಯ ಭಾಗವಾಗಿ, ಅರ್ಹ ಮತ್ತು ಪ್ರತಿಭಾನ್ವಿತ ಅರ್ಜಿದಾರರಿಗೆ ಅಗತ್ಯದ ಆಧಾರದಲ್ಲಿ ಸ್ಕಾಲರ್‌ಶಿಪ್ ನೆರವು ಒದಗಿಸಲಾಗುವುದು.
ಅರ್ಹತೆ: 9 ಮತ್ತು ಹೆಚ್ಚಿನ ತರಗತಿಯಿಂದ ಪದವಿ ಹಂತದವರೆಗಿನ, ಐಟಿಐ, ಪಾಲಿಟೆಕ್ನಿಕ್, ವೃತ್ತಿಪರ ಹಾಗೂ ಔದ್ಯೋಗಿಕ ಶಿಕ್ಷಣ ಪಡೆಯುವ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು. ಈ ಹಿಂದಿನ ಪರೀಕ್ಷೆಯಲ್ಲಿ ಕನಿಷ್ಠ ಶೇ.60ರಷ್ಟು ಅಂಕ ಗಳಿಸಿರಬೇಕು, ಕುಟುಂಬದ ವಾರ್ಷಿಕ ಆದಾಯ 4 ಲಕ್ಷ ರೂ.ಗಿಂತ ಹೆಚ್ಚು ಇರಬಾರದು.
ನೆರವು: 9 ಮತ್ತು 10ನೇ ತರಗತಿಯ ವಿದ್ಯಾರ್ಥಿನಿಯರಿಗೆ ವಾರ್ಷಿಕ 6 ಸಾವಿರ ರೂ, 11 ಮತ್ತು 12ನೇ ತರಗತಿಯ ವಿದ್ಯಾರ್ಥಿನಿಯರಿಗೆ ವಾರ್ಷಿಕ 12 ಸಾವಿರ ರೂ., ಪಾಲಿಟೆಕ್ನಿಕ್, ಐಟಿಐ, ಡಿಪ್ಲೊಮಾ, ಪದವಿ ಹಾಗೂ ಇತರ ವಿಷಯದ ವಿದ್ಯಾರ್ಥಿನಿಯರಿಗೆ ವಾರ್ಷಿಕ 18 ಸಾವಿರ ರೂ. ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮೇ 31, 2019
ಅರ್ಜಿ: ಇ-ಮೇಲ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬೇಕು.
ಜಾಲತಾಣ:  http://www.b4s.in/bharati/BKS1

*************
ವಿದ್ಯಾರ್ಥಿವೇತನ
(ಆದಾಯ ಆಧಾರಿತ):
ಎಚ್‌ಡಿಎಫ್‌ಸಿ ಬ್ಯಾಂಕ್ ಎಜುಕೇಶನಲ್ ಕ್ರೈಸಿಸ್ ಸ್ಕಾಲರ್‌ಶಿಪ್ ಸಪೋರ್ಟ್ 2019

ವಿವರ: ಆರ್ಥಿಕ ಸಮಸ್ಯೆಯಲ್ಲಿರುವ ಹಾಗೂ ಕುಟುಂಬದ ಬಿಕ್ಕಟ್ಟಿನ ಸಂತ್ರಸ್ತರಾಗಿರುವ ವಿದ್ಯಾರ್ಥಿಗಳಿಗೆ ಎಚ್‌ಡಿಎಫ್‌ಸಿ ಬ್ಯಾಂಕ್ ನೀಡುವ ಸ್ಕಾಲರ್‌ಶಿಪ್ ಯೋಜನೆಯಿದು. ಶಿಕ್ಷಣವನ್ನು ಮುಂದುವರಿಸಲು ಆರ್ಥಿಕ ನೆರವು ನೀಡುವ ಮತ್ತು ಅರ್ಧದಲ್ಲೇ ಶಾಲೆ ಬಿಡುವ ಮಕ್ಕಳ ಪ್ರಮಾಣವನ್ನು ಕಡಿಮೆ ಗೊಳಿಸುವ ಉದ್ದೇಶದಿಂದ ನೀಡುವ ಸ್ಕಾಲರ್‌ಶಿಪ್ ಇದಾಗಿದೆ.
ಅರ್ಹತೆ: 6ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳು, ಪದವಿ, ಸ್ನಾತಕೋತ್ತರ ಅಥವಾ ಡಾಕ್ಟೋರಲ್ ವಿದ್ಯಾರ್ಥಿಗಳು, ಮಾನ್ಯತೆ ಪಡೆದ ಸಂಸ್ಥೆಗಳಿಂದ ಐಟಿಐ, ಡಿಪ್ಲೊಮಾ, ಪಾಲಿಟೆಕ್ನಿಕ್, ಪಿಎಚ್‌ಡಿ ಪದವಿ ಅಧ್ಯಯನ ನಡೆಸುವ ವಿದ್ಯಾರ್ಥಿಗಳು, ಕಳೆದ 3 ವರ್ಷಗಳಿಂದ ಕೌಟುಂಬಿಕ ಬಿಕ್ಕಟ್ಟಿನ (ಅನಾಥರು, ಕುಟುಂಬದಲ್ಲಿ ದುಡಿಯುವ ಸದಸ್ಯರ ಮರಣದಿಂದ ಕಂಗಾಲಾಗಿರುವವರು, ಅಂಗ ವಿಕಲರು ಇತ್ಯಾದಿ) ಸಂತ್ರಸ್ತರು ಅರ್ಜಿ ಸಲ್ಲಿಸಬಹುದು.
 ನೆರವು: ಆಯ್ಕೆಯಾದ ಶಾಲಾ ವಿದ್ಯಾರ್ಥಿಗಳಿಗೆ ಒಂದು ಬಾರಿಗೆ 10 ಸಾವಿರ ರೂ., ಆಯ್ಕೆಯಾದ ವಿವಿ, ಐಟಿಐ, ಡಿಪ್ಲೊಮಾ ಮತ್ತು ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ 25 ಸಾವಿರ ರೂ. ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಜೂನ್ 15, 2019
ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ:  http://www.b4s.in/bharati/HEC6

*************************
ವಿದ್ಯಾರ್ಥಿವೇತನ
(ಆದಾಯ ಮತ್ತು ಅರ್ಹತೆ ಆಧಾರಿತ):
ಜಿಇವಿ ಮೆಮೊರಿಯಲ್ ಮೆರಿಟ್ ಸ್ಕಾಲರ್‌ಶಿಪ್ 2019 ಫಾರ್ ಲಾ ಸ್ಟೂಡೆಂಟ್ಸ್

 ವಿವರ: ದೇಶದ ಯಾವುದೇ ಪ್ರತಿಷ್ಠಿತ ಕಾನೂನು ಸಂಸ್ಥೆಯಲ್ಲಿ ಕಾನೂನು ಪದವಿ ಅಧ್ಯಯನ ನಡೆಸಬಯಸುವ ವಿದ್ಯಾರ್ಥಿ ಗಳಿಗೆ ಡಾ ಗೂಲಂ ಇ.ವಹರ್ನವತಿ ಸ್ಕಾಲರ್‌ಶಿಪ್ ಫಂಡ್ ನೀಡುವ ಸ್ಕಾಲರ್‌ಶಿಪ್.
ಅರ್ಹತೆ: ಪ್ರತಿಷ್ಠಿತ ಕಾನೂನು ಸಂಸ್ಥೆಯಲ್ಲಿ ಎಲ್‌ಎಲ್‌ಬಿ/ಎಲ್‌ಎಲ್‌ಎಂ ಪದವಿ ಅಧ್ಯಯನ ನಡೆಸುತ್ತಿರುವ ಭಾರತೀಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಸಿಎಲ್‌ಎಟಿ, ಐಎಸ್‌ಎಟಿ, ಎಲ್‌ಸ್ಯಾಟ್-ಇಂಡಿಯಾ, ಎಐಎಲ್‌ಇಟಿ ಪರೀಕ್ಷೆ ತೇರ್ಗಡೆಯಾಗಿರುವ ಅಥವಾ ಇತರ ಕಾನೂನು ಪ್ರವೇಶ ಪರೀಕ್ಷೆ ತೇರ್ಗಡೆಯಾಗಿರುವವರೂ ಅರ್ಜಿ ಸಲ್ಲಿಸಬಹುದು. ಕುಟುಂಬದ ವಾರ್ಷಿಕ ವರಮಾನ 10 ಲಕ್ಷ ರೂ.ಗಿಂತ ಹೆಚ್ಚಿರಬಾರದು. 10 ಅಥವಾ 12ನೇ ತರಗತಿ ಪರೀಕ್ಷೆಯಲ್ಲಿ ಕನಿಷ್ಠ ಶೇ.60 ಅಂಕ ಗಳಿಸಿರಬೇಕು.
ನೆರವು: ಅರ್ಹ ಅಭ್ಯರ್ಥಿಗಳಿಗೆ ವಾರ್ಷಿಕ 50 ಸಾವಿರ ರೂ.ಯಿಂದ 2 ಲಕ್ಷ ರೂ.ವರೆಗಿನ ಸ್ಕಾಲರ್‌ಶಿಪ್ ನೀಡಲಾಗು ವುದು. ಅಲ್ಲದೆ ತರಬೇತಿ ಮತ್ತು ಮಾರ್ಗದರ್ಶನವನ್ನೂ ಪಡೆಯುತ್ತಾರೆ.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮೇ 31, 2019
ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ:  http://www.b4s.in/bharati/GMM2

*******************
ವಿದ್ಯಾರ್ಥಿವೇತನ
(ಅರ್ಹತೆ ಆಧಾರಿತ):
ಐಇಎ ಸಿ3ಇ ಫೆಲೊಶಿಪ್ 2019

ವಿವರ: ದಿ ಎನರ್ಜಿ ಆ್ಯಂಡ್ ರಿಸೋರ್ಸಸ್ ಇನ್‌ಸ್ಟಿಟ್ಯೂಟ್ (ಟಿಇಆರ್‌ಐ) ಮತ್ತು ದಿ ಇಂಟರ್‌ನ್ಯಾಷನಲ್ ಎನರ್ಜಿ ಏಜೆನ್ಸಿ (ಐಇಎ) ಶುದ್ಧ ಶಕ್ತಿ ತಂತ್ರಜ್ಞಾನದ ಪ್ರಗತಿ ವಿಷಯದಲ್ಲಿ ಸಂಶೋಧನೆ ನಡೆಸಲು ಯುವ ಮಹಿಳಾ ಸಂಶೋಧಕರಿಂದ ಅರ್ಜಿ ಆಹ್ವಾನಿಸಿದೆ.
 ಅರ್ಹತೆ: ಮಹಿಳಾ ಸಬಲೀಕರಣ, ಶಿಕ್ಷಣ ಮತ್ತು ಅಭಿವೃದ್ಧಿ ಮುಂತಾದ ವಿಷಯದಲ್ಲಿ ಸಂಶೋಧನೆ ನಡೆಸಲು ಆಸಕ್ತಿ ಇರುವ ಭಾರತೀಯ ಮಹಿಳೆಯರು ಅರ್ಜಿ ಸಲ್ಲಿಸಬಹುದು.
ನೆರವು: ಅರ್ಹ ಅಭ್ಯರ್ಥಿಗಳಿಗೆ ಐಇಎ ಪ್ಯಾರಿಸ್‌ನಲ್ಲಿ ನಡೆಸುವ ಕಾರ್ಯಕ್ರಮದಲ್ಲಿ ತಿಂಗಳಿಗೆ 2 ಸಾವಿರ ಯುರೋ ಮೊತ್ತದ ಸ್ಟೈಪೆಂಡ್, ಪ್ಯಾರಿಸ್‌ಗೆ ಹೋಗಿ ಬರುವ ವಿಮಾನದ ಪ್ರಯಾಣ ದರವನ್ನು ಪಾವತಿಸಲಾಗುವುದು. ಅಲ್ಲದೆ ಐಇಎ ನಡೆಸುವ ‘ದಿ ಕ್ಲೀನ್ ಎನರ್ಜಿ ಎಜುಕೇಶನ್ ಆ್ಯಂಡ್ ಎಂಪವರ್‌ಮೆಂಟ್’ಗೆ ಪ್ರವೇಶಾವಕಾಶ ಪಡೆಯಲು ತರಬೇತಿ ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮೇ 20, 2019
ಅರ್ಜಿ: ಇ-ಮೇಲ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/ICF3

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)