varthabharthi

ಕ್ರೀಡೆ

ಐಟಿಎಫ್ ಮಹಿಳಾ ಇವೆಂಟ್

ಅಂಕಿತಾ ರೈನಾ ಸೆಮಿಗೆ ಲಗ್ಗೆ

ವಾರ್ತಾ ಭಾರತಿ : 11 May, 2019

ಹೊಸದಿಲ್ಲಿ, ಮೇ 10: ಕೆಳ ರ್ಯಾಂಕಿನ ಆಟಗಾರ್ತಿ ಎಡೈಸ್ ವಾಂಗ್ ಚೊಂಗ್ ಸವಾಲನ್ನು ದಿಟ್ಟವಾಗಿ ಎದುರಿಸಿದ ಭಾರತದ ಅಂಕಿತಾ ರೈನಾ 60,000 ಯುಎಸ್ ಡಾಲರ್ ಬಹುಮಾನ ಮೊತ್ತದ ಐಟಿಎಫ್ ಮಹಿಳಾ ಇವೆಂಟ್‌ನಲ್ಲಿ ಶುಕ್ರವಾರ ಸೆಮಿ ಫೈನಲ್‌ಗೆ ಪ್ರವೇಶಿಸಿದ್ದಾರೆ. ಸುಮಾರು 2 ಗಂಟೆಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ, 175ನೇ ರ್ಯಾಂಕಿನ ರೈನಾ ಹಾಂಕಾಂಗ್‌ನ ಎದುರಾಳಿ ವಾಂಗ್ ಚೊಂಗ್‌ರನ್ನು 2-6, 6-4, 7-5 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ. ರೈನಾ ಈ ವರ್ಷ ಸಿಂಗಾಪುರ ಓಪನ್‌ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದರೆ, ಇಸ್ತಾಂಬುಲ್‌ನಲ್ಲಿ ನಡೆದ 60,000 ಯುಎಸ್ ಡಾಲರ್ ಬಹುಮಾನ ಮೊತ್ತದ ಟೂರ್ನಿಯಲ್ಲಿ ರನ್ನರ್ಸ್ ಅಪ್ ಆಗಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)