varthabharthi

ಕ್ರೀಡೆ

ಪುರುಷರ ಸ್ಕೀಟ್ ಫೈನಲ್ ವಂಚಿತರಾದ ಅಹ್ಮದ್ ಖಾನ್

ವಾರ್ತಾ ಭಾರತಿ : 12 May, 2019

ಚಾಂಗ್ವಾನ್(ದ.ಕೊರಿಯಾ), ಮೇ 11: ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಶಾಟ್‌ಗನ್ ವಿಶ್ವಕಪ್‌ನಲ್ಲಿ ಭಾರತದ ಹಿರಿಯ ಶೂಟರ್ ಮೈರಾಜ್ ಅಹ್ಮದ್ ಖಾನ್ ಫೈನಲ್‌ಗೆ ತೇರ್ಗಡೆಯಾಗುವುದರಿಂದ ವಂಚಿತರಾದರು.

 ಇಲ್ಲಿ ಶನಿವಾರ ನಡೆದ ಅರ್ಹತಾ ಸುತ್ತಿನಲ್ಲಿ ಖಾನ್ 125ರಲ್ಲಿ 121 ಅಂಕ ಗಳಿಸಿದ್ದಾರೆ. ಸ್ಪರ್ಧೆಯ ಮೂರನೇ ದಿನ ಐಎಸ್‌ಎಸ್‌ಎಫ್ ವಿಶ್ವಕಪ್ ಹಂತದಲ್ಲಿ ಸ್ಕೀಟ್ ವಿಭಾಗದಲ್ಲಿ ಪದಕ ಜಯಿಸಿದ ಭಾರತದ ಏಕೈಕ ಶೂಟರ್ ಅಹ್ಮದ್ ಖಾನ್ 11ನೇ ಸ್ಥಾನ ಪಡೆದು ಫೈನಲ್ ತಲುಪುವುದರಿಂದ ವಂಚಿತರಾದರು. ಎರಡು ಬಾರಿಯ ಒಲಿಂಪಿಯನ್ ಹಾಗೂ ನಾಲ್ಕು ಬಾರಿ ವಿಶ್ವ ಚಾಂಪಿಯನ್ ಅಮೆರಿಕದ ವಿನ್ಸೆಂಟ್ ಹ್ಯಾನ್‌ಕಾಕ್ ಚಿನ್ನದ ಪದಕ ಜಯಿಸಿದರು. ಸ್ಪರ್ಧೆಯಲ್ಲಿದ್ದ ಭಾರತದ ಇನ್ನೋರ್ವ ಶೂಟರ್ ಶೀರಾಝ್ ಶೇಖ್ ಶುಕ್ರವಾರ 50ರಲ್ಲಿ 50 ಅಂಕ ಗಳಿಸಿದ್ದರು. ಆದರೆ, ಶನಿವಾರ ಒಟ್ಟು 119 ಅಂಕ ಗಳಿಸಿ 33ನೇ ಸ್ಥಾನಕ್ಕೆ ತೃಪ್ತಿಪಟ್ಟರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)