varthabharthi

ಕ್ರೀಡೆ

ಡೆನಾ್ಮರ್ಕ್ ಇಂಟರ್‌ನ್ಯಾಶನಲ್ ಬ್ಯಾಡ್ಮಿಂಟನ್ ಟೂರ್ನಿ

ಸೆಮಿ ಫೈನಲ್‌ನಲ್ಲಿ ಸೋತ ಭಾರತದ ಶಟ್ಲರ್‌ಗಳು

ವಾರ್ತಾ ಭಾರತಿ : 13 May, 2019

ಹೈದರಾಬಾದ್, ಮೇ 12: ಫಾರುಮ್‌ನಲ್ಲಿ ಶನಿವಾರ ತಡರಾತ್ರಿ ನಡೆದ ಡೆನ್ಮಾರ್ಕ್ ಇಂಟರ್‌ನ್ಯಾಶನಲ್ ಚಾಲೆಂಜ್ ಬ್ಯಾಡ್ಮಿಂಟನ್ ಟೂರ್ನಿಯ ಸೆಮಿ ಫೈನಲ್‌ನಲ್ಲಿ ಶುಭಾಂಕರ್ ಡೇ ಹಾಗೂ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾನಿಕ್‌ರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಸೋಲುಂಡಿದ್ದಾರೆ. ಸಿಂಗಲ್ಸ್ ಪಂದ್ಯದಲ್ಲಿ 5ನೇ ಶ್ರೇಯಾಂಕದ ಶುಭಾಂಕರ್ 2ನೇ ಶ್ರೇಯಾಂಕದ ಹ್ಯಾನ್ಸ್-ಕ್ರಿಸ್ಟಿಯನ್ ಸೊಲ್ಬರ್ಗ್ ವಿಟ್ಟಿಂಗ್‌ಹಸ್ ವಿರುದ್ಧ 17-21, 21-13, 21-10 ಗೇಮ್‌ಗಳಿಂದ ಸೋತರು. ಶುಭಾಂಕರ್ ಮೊದಲ ಗೇಮ್ ಜಯಿಸಿ ಶುಭಾರಂಭ ಮಾಡಿದ್ದರು. ಆದರೆ, ಉಳಿದೆರಡು ಗೇಮ್‌ಗಳನ್ನು ಸೋತಿದ್ದಾರೆ.

ಡಬಲ್ಸ್ ಪಂದ್ಯದಲ್ಲಿ ಸಾತ್ವಿಕ್-ಚಿರಾಗ್ ಜೋಡಿ ಇಂಗ್ಲೆಂಡ್‌ನ 4ನೇ ಶ್ರೇಯಾಂಕದ ಬೆನ್ ಲೇನ್ ಹಾಗೂ ಸಿಯಾನ್ ವೆಂಡಿ ವಿರುದ್ಧ 22-24, 20-22 ಅಂತರದಿಂದ ಸೋತಿದ್ದಾರೆ. ಮಹಿಳೆಯರ ಸಿಂಗಲ್ಸ್‌ನಲ್ಲಿ ಆಕರ್ಷಿ ಕಶ್ಯಪ್ ಹಾಗೂ ನೇಹಾ ಪಂಡಿತ್ ಎರಡನೇ ಸುತ್ತಿನಲ್ಲೇ ಎಡವಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)