varthabharthi

ಕ್ರೀಡೆ

ತಾಹಿರ್‌ಗೆ ಪರ್ಪಲ್ ಕ್ಯಾಪ್

ವಾರ್ತಾ ಭಾರತಿ : 13 May, 2019

ಹೈದರಾಬಾದ್, ಮೇ 12: ಚೆನ್ನೈ ಸೂಪರ್ ಕಿಂಗ್ಸ್ ಲೆಗ್ ಸ್ಪಿನ್ನರ್ ಇಮ್ರಾನ್ ತಾಹಿರ್ ತಮ್ಮದೇ ದೇಶದ ಕಾಗಿಸೊ ರಬಾಡರನ್ನು ಹಿಂದಿಕ್ಕಿ ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದವರಿಗೆ ನೀಡುವ ಪರ್ಪಲ್ ಕ್ಯಾಪ್‌ನ್ನು ತನ್ನದಾಗಿಸಿಕೊಂಡಿದ್ದಾರೆ. 40ರ ಹರೆಯದ ದ.ಆಫ್ರಿಕದ ತಾಹಿರ್ ಐಪಿಎಲ್‌ನಲ್ಲಿ ಪರ್ಪಲ್ ಕ್ಯಾಪ್ ಪಡೆದ ಹಿರಿಯ ಆಟಗಾರನಾಗಿದ್ದಾರೆ. ಮುಂಬೈ ತಂಡದ ಇಶಾನ್ ಕಿಶನ್ ವಿಕೆಟ್ ಪಡೆದು ಈ ವರ್ಷದ ಐಪಿಎಲ್‌ನಲ್ಲಿ 26ನೇ ವಿಕೆಟ್ ಪಡೆದ ತಾಹಿರ್ ಡೆಲ್ಲಿ ಕ್ಯಾಪಿಟಲ್ಸ್ ಪರ 25 ವಿಕೆಟ್‌ಗಳನ್ನು ಪಡೆದಿದ್ದ ರಬಾಡ ದಾಖಲೆಯನ್ನು ಮುರಿದರು. ತಾಹಿರ್ 6.66ರ ಇಕಾನಮಿ ರೇಟ್‌ನಲ್ಲಿ 17 ಪಂದ್ಯಗಳಲ್ಲಿ ಒಟ್ಟು 26 ವಿಕೆಟ್ ಉಡಾಯಿಸಿದ್ದಾರೆ. ಬೆನ್ನುನೋವಿನಿಂದಾಗಿ ಟೂರ್ನಿಯಿಂದ ಬೇಗನೆ ಹೊರ ನಡೆದಿದ್ದ ರಬಾಡ 12 ಪಂದ್ಯಗಳಲ್ಲಿ 25 ವಿಕೆಟ್‌ಗಳನ್ನು ಪಡೆದಿದ್ದರು. ತಾಹಿರ್ ಫೈನಲ್ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್, ಕಿಶನ್ ಸಹಿತ 23 ರನ್‌ಗೆ 3 ವಿಕೆಟ್ ಪಡೆದಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)