varthabharthi

ಗಲ್ಫ್ ಸುದ್ದಿ

ಚೀನಾದ ವಿಶ್ವವಿದ್ಯಾನಿಯಲ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ ಗಲ್ಫ್ ವೈದ್ಯಕೀಯ ವಿಶ್ವವಿದ್ಯಾನಿಲಯ

ವಾರ್ತಾ ಭಾರತಿ : 13 May, 2019

ದುಬೈ , ಮೇ13: ಮಧ್ಯ ಪ್ರಾಚ್ಯದ ಪ್ರತಿಷ್ಠಿತ ವೈದ್ಯಕೀಯ ವಿಶ್ವವಿದ್ಯಾನಿಲಯವಾಗಿರುವ ಗಲ್ಫ್ ವೈದ್ಯಕೀಯ ವಿಶ್ವವಿದ್ಯಾನಿಲಯ (ಜಿಎಂಯು) ಚೀನಾದ ಅಗ್ರಮಾನ್ಯ ಸಂಶೋಧನಾ, ವೈದ್ಯಕೀಯ ಸೇವೆ, ವೈದ್ಯಕೀಯ ಶಿಕ್ಷಣ ಸಂಸ್ಥೆ ಸನ್ ಯತ್-ಸೆನ್ ವಿಶ್ವವಿದ್ಯಾನಿಯದ ಜೊತೆ ಶಿಕ್ಷಣ ಮತ್ತು ಸಂಶೋಧನೆ ಕ್ಷೇತ್ರದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದೆ.

ಜಿಎಂಯು ಕುಲಪತಿ ಪ್ರೊ. ಹೊಸ್ಸಮ್ ಹಮ್ದಿ ಹಾಗೂ ಸನ್ ಯತ್-ಸೆನ್ ವಿಶ್ವವಿದ್ಯಾನಿಲಯದ ಉಪಾಧ್ಯಕ್ಷ ಡಾ. ಕ್ಸಿಯೊ ಹೈಪೆಂಗ್ ತಮ್ಮ ವಿಶ್ವವಿದ್ಯಾನಿಲಯಗಳ ಪರವಾಗಿ ಒಪ್ಪಂದಕ್ಕೆ ಸಹಿ ಹಾಕಿದರು.

ಈ ಒಪ್ಪಂದದ ಪ್ರಕಾರ, ಎರಡು ವಿಶ್ವವಿದ್ಯಾನಿಲಯಗಳ ಮಧ್ಯೆ ಜಂಟಿ ಶಿಕ್ಷಣ/ತರಬೇತಿ ಚಟುವಟಿಕೆಗಳು, ಜಂಟಿ ಸಂಶೋಧನೆಗಳು, ಶೈಕ್ಷಣಿಕ ವರ್ಗಾವಣೆ, ಸಿಬ್ಬಂದಿ/ವಿದ್ಯಾರ್ಥಿಗಳ ವರ್ಗಾವಣೆ ಸೇರಿದಂತೆ ಶಿಕ್ಷಣ, ತರಬೇತಿ ಮತ್ತು ಸಂಶೋಧನಾ ಸಹಕಾರ ನೆರವೇರಲಿದೆ. ಸನ್ ಯತ್-ಸೆನ್ ವಿಶ್ವವಿದ್ಯಾನಿಲಯದ ಜೊತೆ ಜಿಎಂಯು ಕೈಜೋಡಿಸುವ ಮೂಲಕ ಎರಡು ವಿಶ್ವವಿದ್ಯಾನಿಲಯಗಳ ಮಧ್ಯೆ ಹೆಚ್ಚಿನ ವೃತ್ತಿಪರ ಸಹಯೋಗ ಮತ್ತು ವರ್ಗಾವಣೆಗಳಿಗೆ ದಾರಿಯಾಗಲಿದೆ ಎಂದು ಪ್ರೊ. ಹೊಸ್ಸಮ್ ಹಮ್ದಿ ಭರವಸೆ ವ್ಯಕ್ತಪಡಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)