varthabharthi

ನಿಮ್ಮ ಅಂಕಣ

‘ಅಂಡರ್ ಕರೆಂಟ್’ ಎಲ್ಲಿದೆ?

ವಾರ್ತಾ ಭಾರತಿ : 14 May, 2019
ಜಿ. ರವಿಕಿರಣ ರೈ, ಕೋಟೆಕಾರ್, ಮಂಗಳೂರು

ಮಾನ್ಯರೇ,

ಮೊದಲೆಲ್ಲಾ ಈ ಚುನಾವಣೆಯಲ್ಲಿ ಮೋದಿ ಅಲೆ ಮಾತ್ರವಲ್ಲ ಸುನಾಮಿ ಇದೆ ಎಂದು ಹೇಳುತ್ತಿದ್ದವರು ಈಗ ವರಸೆ ಬದಲಿಸಿ ಮೋದಿ ಪರ ‘ಅಂಡರ್ ಕರೆಂಟ್’ ಇದೆ ಎನ್ನುತ್ತಿದ್ದಾರೆ. ಅಂಡರ್ ಕರೆಂಟ್ ಎಂದರೆ ಗುಪ್ತಗಾಮಿನಿಯಾಗಿ ಹರಿಯುವ ಮತದಾರರ ಒಲವು ಅರ್ಥಾತ್ ‘‘ಒಳಹರಿವು’’. ನಾಲ್ಕನೆಯ ಹಂತದ ಚುನಾವಣೆ ಮುಗಿದ ನಂತರ ಮೋದಿ ಅಲೆ ಇಲ್ಲವೇ ಇಲ್ಲ ಎಂದು ಸಾಬೀತಾದ ಮೇಲೆ ಐದನೆಯ ಹಂತದ ಮತದಾನದ ವೇಳೆ ಮೋದಿಪರ ಅಂಡರ್ ಕರೆಂಟ್ ಅರ್ಥಾತ್ ಒಳಹರಿವು ಇದೆ ಎಂಬ ಹೊಸ ಶಬ್ದಾವಳಿ ಹುಟ್ಟು ಹಾಕಿ ಜನರನ್ನು ಹಾಗೂ ಮಾಧ್ಯಮಗಳನ್ನು ಗೊಂದಲದಲ್ಲಿ ಹಾಕಿ, ನಿರಾಶರಾಗಿರುವ ಬಿಜೆಪಿ ಪರ ಕಾರ್ಯಕರ್ತರಲ್ಲಿ ಧೈರ್ಯ ತುಂಬುವ ಪ್ರಯತ್ನ ನಡೆಯುತ್ತಿದೆ. ಅಂಡರ್ ಕರೆಂಟ್ ಇರುವುದು ನಿಜವೇ ಆಗಿದ್ದರೆ ಬೆಂಗಳೂರು ಮತ್ತು ಮುಂಬೈಯಂತಹ ವಿದ್ಯಾವಂತರೇ ಹೆಚ್ಚಿರುವ ನಗರಗಳಲ್ಲಿ ಮತದಾನ ಶೇ. 50ಕ್ಕಿಂತ ಯಾಕೆ ಹೆಚ್ಚಾಗಲಿಲ್ಲ? ನಗರಗಳಲ್ಲಿ ಆಗಿರುವ ಕಡಿಮೆ ಮತದಾನ ಯಾವುದೇ ಒಳಹರಿವು ಅಥವಾ ಅಂಡರ್ ಕರೆಂಟ್ ಇಲ್ಲ ಎನ್ನುವುದಕ್ಕೆ ಸಾಕ್ಷಿ.

 2014ರಲ್ಲಿ ಮೋದಿ ಅಲೆಯ ಹೆಸರಲ್ಲಿ ಇವಿಎಂ ತಿರುಚುವಿಕೆಯ ಆರೋಪವನ್ನು ಮುಚ್ಚಿ ಹಾಕಲಾಯಿತು. ಈ ಬಾರಿ ಒಳಹರಿವು ಅಂಡರ್ ಕರೆಂಟ್ ಎಂಬ ಹೆಸರಲ್ಲಿ ಮತ್ತೆ ನಡೆಯಬಹುದಾದ ಇವಿಎಂ ತಿರುಚುವಿಕೆ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆಯೋ ಎಂಬ ಶಂಕೆ ಮೂಡುತ್ತಿದೆ. 19 ಲಕ್ಷ ಇವಿಎಂಗಳು ಕಾಣೆಯಾದ ನಂತರ ಚುನಾವಣಾ ಆಯೋಗದ ಮೇಲೆ ಸಾಮಾನ್ಯ ಮತದಾರರ ನಂಬಿಕೆ ಸಂಪೂರ್ಣ ಕಳೆದು ಹೋಗಿದೆ. ಸುಪ್ರೀಂ ಕೋರ್ಟ್ ಸಹ ಜನರ ಸಹಾಯಕ್ಕೆ ಬರುತ್ತಿಲ್ಲ. ಇದು ಪ್ರಜಾತಂತ್ರದ ಅವನತಿಯ ಪ್ರಮುಖ ಲಕ್ಷಣ.

 -ಜಿ. ರವಿಕಿರಣ ರೈ, ಕೋಟೆಕಾರ್, ಮಂಗಳೂರು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)