varthabharthi

ಕ್ರೀಡೆ

ವಿಶ್ವಕಪ್‌ನಲ್ಲಿ ಯಾವ ತಂಡವೂ ಫೇವರಿಟ್ ಆಗಿಲ್ಲ: ರೋಡ್ಸ್

ವಾರ್ತಾ ಭಾರತಿ : 14 May, 2019

ಮುಂಬೈ, ಮೇ 13: ಮುಂಬರುವ ವಿಶ್ವಕಪ್‌ನಲ್ಲಿ ಭಾರತ ಸಮತೋಲಿತ ತಂಡವಾಗಿದೆ. ಆದರೆ, ವಿಶ್ವಕಪ್ ಮಾದರಿ ಬದಲಾಗಿರುವ ಕಾರಣ ಯಾವ ತಂಡವೂ ಫೇವರಿಟ್ ಆಗಿ ಗುರುತಿಸಿಕೊಂಡಿಲ್ಲ ಎಂದು ದಕ್ಷಿಣ ಆಫ್ರಿಕದ ಮಾಜಿ ಸ್ಟಾರ್ ಆಟಗಾರ ಜಾಂಟಿ ರೋಡ್ಸ್ ಅಭಿಪ್ರಾಯಪಟ್ಟಿದ್ದಾರೆ. ಈ ವರ್ಷದ ವಿಶ್ವಕಪ್ ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದ್ದು, ಎಲ್ಲ 10 ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ. ಅಗ್ರ-4 ತಂಡ ಸೆಮಿ ಫೈನಲ್‌ಗೆ ಅರ್ಹತೆ ಪಡೆಯುತ್ತದೆ.‘‘ಭಾರತ 15 ಸದಸ್ಯರ ಬಲಿಷ್ಠ ತಂಡ ಆಯ್ಕೆ ಮಾಡಿದೆ. ಇತರ ಆರು ತಂಡಗಳು ಬಲಿಷ್ಠವಾಗಿವೆ. ವಿಶ್ವಕಪ್‌ನಲ್ಲಿ ಶಕ್ತಿಶಾಲಿ ತಂಡವನ್ನು ಆಡಿಸಲಾಗುತ್ತದೆ. ನಿರ್ದಿಷ್ಟ ದಿನದಂದು ವಾತಾವರಣಕ್ಕೆ ತಕ್ಕಂತೆ ಸಮತೋಲಿತ 11 ಆಟಗಾರರ ಆಯ್ಕೆಯ ಮೇಲೆ ಎಲ್ಲವೂ ಅವಲಂಬಿತವಾಗಿದೆ’’ ಎಂದು ಅತ್ಯುತ್ತಮ ಫೀಲ್ಡಿಂಗ್‌ಗೆ ಖ್ಯಾತಿ ಪಡೆದಿದ್ದ ರೋಡ್ಸ್ ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)