varthabharthi

ಕ್ರೀಡೆ

ಡಬ್ಲ್ಯುಟಿಎ ರ್ಯಾಂಕಿಂಗ್: ಅಗ್ರ ಸ್ಥಾನ ಕಾಯ್ದುಕೊಂಡ ಒಸಾಕಾ

ವಾರ್ತಾ ಭಾರತಿ : 14 May, 2019

ಪ್ಯಾರಿಸ್, ಮೇ 13: ಮ್ಯಾಡ್ರಿಡ್ ಓಪನ್ ಫೈನಲ್‌ನಲ್ಲಿ ರೊಮಾನಿಯದ ಸಿಮೊನಾ ಹಾಲೆಪ್‌ಗೆ ಸೋಲನುಭವಿಸಿದ ಹಿನ್ನೆಲೆಯಲ್ಲಿ ಜಪಾನ್ ಆಟಗಾರ್ತಿ ನವೊಮಿ ಒಸಾಕಾ ಸೋಮವಾರ ಬಿಡುಗಡೆಯಾಗಿರುವ ಡಬ್ಲ್ಯುಟಿಎ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಕಾಯ್ದುಕೊಂಡಿದ್ದಾರೆ.

 21ರ ಹರೆಯದ ಒಸಾಕಾ ಸ್ಪೇನ್ ರಾಜಧಾನಿಯಲ್ಲಿ ನಡೆದಿದ್ದ ಮ್ಯಾಡ್ರಿಡ್ ಓಪನ್‌ನಲ್ಲಿ ಅಂತಿಮ-8ರ ಹಂತದಲ್ಲೂ ಸೋತಿದ್ದರೂ ಕನಿಷ್ಠ ಇನ್ನೂ ಒಂದು ವಾರ ಅಗ್ರ ಸ್ಥಾನದಲ್ಲೇ ಮುಂದುವರಿಯಲಿದ್ದಾರೆ.

ಸೆಟ್‌ನ್ನು ಕಳೆದುಕೊಳ್ಳದೇ ಮ್ಯಾಡ್ರಿಡ್ ಓಪನ್ ಮುಡಿಗೇರಿಸಿಕೊಂಡ ಮೊದಲ ಡಚ್ ಆಟಗಾರ್ತಿಯಾಗಿರುವ ಕಿಕಿ ಬೆರ್ಟೆನ್ಸ್ ಜೀವನಶ್ರೇಷ್ಠ 4ನೇ ಸ್ಥಾನಕ್ಕೇರಿದ್ದಾರೆ. ಅಂಜೆಲಿಕ್ ಕೆರ್ಬರ್ ಒಂದು ಸ್ಥಾನ ಭಡ್ತಿ ಪಡೆದು ಮೂರನೇ ಸ್ಥಾನಕ್ಕೇರಿದರೆ, ಕಳೆದ ವರ್ಷ ಮ್ಯಾಡ್ರಿಡ್ ಓಪನ್ ಚಾಂಪಿಯನ್ ಆಗಿದ್ದ ಪೆಟ್ರಾ ಕ್ವಿಟೋವಾ 3 ಸ್ಥಾನ ಕೆಳಜಾರಿ 5ನೇ ಸ್ಥಾನದಲ್ಲಿದ್ದಾರೆ.

►ಡಬ್ಲ್ಯುಟಿಎ ರ್ಯಾಂಕಿಂಗ್: 1. ನವೊಮಿ ಒಸಾಕಾ(ಜಪಾನ್), 2. ಸಿಮೊನಾ ಹಾಲೆಪ್(ರೊಮಾನಿಯ), 3. ಆ್ಯಂಜೆಲಿಕ್ ಕೆರ್ಬರ್(ಜರ್ಮನಿ), 4.ಕಿಕಿ ಬೆರ್ಟೆನ್ಸ್(ಹಾಲೆಂಡ್), 5. ಪೆಟ್ರಾ ಕ್ವಿಟೋವಾ(ಝೆಕ್), 6. ಎಲಿನಾ ಸ್ವಿಟೋಲಿನಾ(ಉಕ್ರೇನ್),7. ಕರೊಲಿನಾ ಪ್ಲಿಸ್ಕೋವಾ(ಝೆಕ್), 8. ಸ್ಲೋಯಾನ್ ಸ್ಟೀಫನ್ಸ್ (ಅಮೆರಿಕ), 9. ಅಶ್ಲೆಘ್ ಬಾರ್ಟಿ(ಆಸ್ಟ್ರೀಯ), 10. ಆರ್ಯನಾ ಸಬಾಲೆಂಕಾ(ಬೆಲಾರಸ್).

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)