varthabharthi

ರಾಷ್ಟ್ರೀಯ

ಬ್ರಿಟಿಷರ ಪರ ಚಮಚಾಗಿರಿ ಮಾಡುತ್ತಿದ್ದ ಆರೆಸ್ಸೆಸ್ಸಿಗರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿಲ್ಲ: ಪ್ರಿಯಾಂಕಾ

ವಾರ್ತಾ ಭಾರತಿ : 14 May, 2019

ಪಂಜಾಬ್, ಮೇ 14: ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಆರೆಸ್ಸೆಸ್ ಎಂದಿಗೂ ಪಾಲ್ಗೊಂಡಿಲ್ಲ, ಬದಲಾಗಿ ಅದು ಬ್ರಿಟಿಷರ ಪರ ಚಮಚಾಗಿರಿ ಮಾಡುತ್ತಿತ್ತು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

“ಇಡೀ ಪಂಜಾಬ್ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದಾಗ, ಆರೆಸ್ಸೆಸ್ಸಿಗರು ಬ್ರಿಟಿಷರ ಪರ ಚಮಚಾಗಿರಿ ಮಾಡುತ್ತಿದ್ದರು. ಅವರು ಎಂದಿಗೂ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿಲ್ಲ” ಎಂದು ಪಂಜಾಬ್ ನಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಪ್ರಿಯಾಂಕಾ ಹೇಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)