varthabharthi

ಗಲ್ಫ್ ಸುದ್ದಿ

ದುಬೈ: ಮೇ 17ರಂದು ಡಿ.ಕೆ.ಎಸ್.ಸಿ ವತಿಯಿಂದ ಇಫ್ತಾರ್ ಕೂಟ

ವಾರ್ತಾ ಭಾರತಿ : 14 May, 2019

ದುಬೈ: ಡಿ.ಕೆ.ಎಸ್.ಸಿ ಯು.ಎ.ಇ ವತಿಯಿಂದ ಮೇ 17ರಂದು ಪರ್ಲ್ ಸಿಟಿ ಸೂಟ್ ಹೋಟೆಲ್ ನಲ್ಲಿ  ಇಫ್ತಾರ್ ಕೂಟ ನಡೆಯಲಿದೆ.

ಡಾ. ಕಾವಲ್ಕಟ್ಟೆ ಹಝ್ರತ್ ಹಾಗೂ ಡಾ. ಅಬ್ದುಲ್ ರಶೀದ್ ಝೈನಿ, ಸಯ್ಯದ್ ತ್ವಾಹ ಬಾಪಕಿ ತಂಙಳ್, ಇಬ್ರಾಹಿಂ ಸಖಾಫಿ ಕೆದಂಬಾಡಿ ಹಾಗೂ ಪ್ರಮಖ ಉಲಮಾಗಳ ನೇತೃತ್ವದಲ್ಲಿ  ಜಲಾಲಿಯ ಮಜಲಿಸ್ ನಡೆಯಲಿದೆ.

ಸಭಾ ಕಾರ್ಯಕ್ರಮವು  ಹಾಜಿ ಮುಹಮ್ಮದ್ ಇಕ್ಬಾಲ್ ಕಣ್ಣಂಗಾರ್ ಅಧ್ಯಕ್ಷತೆಯಲ್ಲಿ, ದುಬೈ ಅಂತಾರಾಷ್ಟ್ರೀಯ ಹೋಲಿ ಖುರ್ಆನ್ ಅವಾರ್ಡ್ ಪ್ರಭಾಷಣ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿರುವ ಡಾ. ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ ಕಕ್ಕಿಂಜೆ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ಸಾದಾತುಗಳು, ಉಲಮಾಗಳು ಅಲ್ಲದೆ  ಯು.ಎ.ಇ ಯ ವಿವಿಧ ಸಂಘ ಸಂಸ್ಥೆಗಳ ನೇತಾರರು, ಉದ್ಯಮಿಗಳು, ಡಿ.ಕೆ.ಎಸ್.ಸಿ ಹಿತೈಷಿಗಳು ಭಾಗವಹಿಸಲಿದ್ದಾರೆ ಎಂದು  ಸ್ವಾಗತ ಸಮಿತಿ ಚೆಯರ್ಮೆನ್ ಇಬ್ರಾಹಿಂ ಕಳತ್ತೂರು ತಿಳಿಸಿದ್ದಾರೆ.


----------------------------------------------------

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)