varthabharthi

ರಾಷ್ಟ್ರೀಯ

ಜೆಟ್ ಏರ್‌ವೇಸ್‌ನ ಡೆಪ್ಯುಟಿ ಸಿಇಒ ಅಮಿತ್ ಅಗರವಾಲ್ ರಾಜೀನಾಮೆ

ವಾರ್ತಾ ಭಾರತಿ : 14 May, 2019

ಹೊಸದಿಲ್ಲಿ,ಮೇ 14: ಸಾಲದ ಸುಳಿಯಲ್ಲಿ ಸಿಲುಕಿ ತನ್ನ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಜೆಟ್ ಏರ್‌ವೇಸ್‌ನ ಉಪ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ(ಸಿಇಒ)ಮತ್ತು ಮುಖ್ಯ ಹಣಕಾಸು ಅಧಿಕಾರಿ(ಸಿಎಫ್‌ಒ) ಅಮಿತ್ ಅಗರವಾಲ್ ಅವರು ವೈಯಕ್ತಿಕ ಕಾರಣಗಳಿಂದಾಗಿ ಸೋಮವಾರ ತನ್ನ ಹುದ್ದೆಗೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ ಎಂದು ಸಂಸ್ಥೆಯು ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ.

2015ರಲ್ಲಿ ಜೆಟ್ ಏರ್‌ವೇಸ್‌ಗೆ ಸೇರ್ಪಡೆಗೊಂಡಿದ್ದ ಅಗರವಾಲ್ ಅದರ ಹಣಕಾಸು ನಿರ್ವಹಣೆಯ ಹೊಣೆಗಾರಿಕೆಯನ್ನು ಹೊಂದಿದ್ದರು. ಜೆಟ್‌ಗೆ ಸೇರುವ ಮುನ್ನ ಅವರು ಸುಝ್ಲನ್ ಎನರ್ಜಿಯಲ್ಲಿ ಸಿಎಫ್‌ಒ ಆಗಿದ್ದರು.

ಅಗರವಾಲ್ ಅವರು ಕಳೆದ ಮಾರ್ಚ್‌ನಲ್ಲಿ ಪತ್ನಿ ಅನಿತಾ ಗೋಯಲ್ ಜೊತೆ ಜೆಟ್ ಆಡಳಿತ ಮಂಡಳಿಗೆ ರಾಜೀನಾಮೆ ನೀಡಿರುವ ಸಂಸ್ಥೆಯ ಸ್ಥಾಪಕ ನರೇಶ ಗೋಯಲ್ ಅವರ ಆಪ್ತರಾಗಿದ್ದರು ಎನ್ನಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)