varthabharthi

ಕ್ರೀಡೆ

ಶಾಟ್ ಗನ್ ವರ್ಲ್ಡ್ ಕರ್ಪ್

ಶಗುನ್ ಚೌಧರಿಗೆ 34ನೇ ಸ್ಥಾನ

ವಾರ್ತಾ ಭಾರತಿ : 15 May, 2019

ಚಾಂಗ್ವಾನ್(ಕೊರಿಯಾ), ಮೇ 14: ಭಾರತದ ಶೂಟರ್ ಶಗುನ್ ಚೌಧರಿ ಇಂಟರ್‌ನ್ಯಾಶನಲ್ ಶೂಟಿಂಗ್ ಸ್ಪೋರ್ಟ್ ಫೆಡರೇಶನ್(ಐಎಸ್‌ಎಸ್‌ಎಫ್)ವಿಶ್ವಕಪ್ ಶಾಟ್ ಗನ್‌ನ ಮಹಿಳೆಯರ ಟ್ರಾಪ್ ಶೂಟಿಂಗ್ ಅರ್ಹತಾ ಸುತ್ತಿನಲ್ಲಿ 34ನೇ ಸ್ಥಾನ ಪಡೆದರು. ಈ ಮೂಲಕ ಉತ್ತಮ ಪ್ರದರ್ಶನ ನೀಡಿದ ಭಾರತೀಯ ಶೂಟರ್ ಎನಿಸಿಕೊಂಡರು.ಕೊರಿಯಾದ ಚಾಂಗ್ವಾನ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಚೌಧರಿ 75ರಲ್ಲಿ 65 ಅಂಕ ಗಳಿಸಿದರು. ವರ್ಷದ ಮೂರನೇ ಶಾಟ್ ಗನ್ ವಿಶ್ವಕಪ್‌ನಲ್ಲಿ ಫ್ರಾನ್ಸ್ ನ ಕರೊಲ್ ಕಾರ್ಮೆನಿಯೆರ್ ಹಾಗೂ ಚೀನಾದ ವಾಂಗ್ ಕ್ಸಿಯಾಜಿಂಗ್ ತಲಾ 72 ಅಂಕ ಗಳಿಸಿದರು. ಸ್ಪರ್ಧೆಯಲ್ಲಿ ಭಾರತದ ಇನ್ನೋರ್ವ ಶೂಟರ್ ರಾಜೇಶ್ವರಿ ಕುಮಾರಿ 58 ಅಂಕ ಗಳಿಸಿ 56ನೇ ಸ್ಥಾನ ಪಡೆದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)