varthabharthi

ಕರ್ನಾಟಕ

ಬಾಗೇಪಲ್ಲಿ: ಅಕ್ರಮವಾಗಿ ನಡೆಸುತ್ತಿದ್ದ ಇಟ್ಟಿಗೆ ಫ್ಯಾಕ್ಟರಿ ತೆರವು

ವಾರ್ತಾ ಭಾರತಿ : 15 May, 2019

ಬಾಗೇಪಲ್ಲಿ: ಪಟ್ಟಣದ ಹೊರವಲಯದ ರೆಡ್ಡಿಕೆರೆಯಲ್ಲಿ ಕಾನೂನು ಬಾಹಿರವಾಗಿ ನಡೆಸುತ್ತಿದ್ದ ಇಟ್ಟಿಗೆ ಫ್ಯಾಕ್ಟರಿಯನ್ನು ತಹಸೀಲ್ದಾರ್ ವಿ.ನಾಗರಾಜು ತೆರವುಗೊಳಿಸಿದ್ದಾರೆ.

ಪಟ್ಟಣದ ರೆಡ್ಡಿಕರೆಯಲ್ಲಿ ಹಲವಾರು ತಿಂಗಳಿಂದ ಆಂದ್ರ ಪ್ರದೇಶದವರು ಸರ್ಕಾರಿ ಅನುಮತಿ ಇಲ್ಲದೆ ಕಾನೂನು ಬಾಹಿರವಾಗಿ ಇಟ್ಟಿಗೆ ಫ್ಯಾಕ್ಟರಿಯನ್ನು ನಡೆಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಬೇಟಿ ನೀಡಿ ಕೂಡಲೆ ಪರಿಶೀಲಿಸಿದಾಗ ಯಾವುದೆ ಅನುಮತಿ ಇಲ್ಲ ಎಂದು ತಿಳಿದಿದ್ದು, ಜಾಗ ಖಾಲಿ ಮಾಡುವಂತೆ ಮಾಲಿಕರಿಗೆ ಸೂಚಿಸಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಿಗ ಅಜಯ್ ಕುಮಾರ್ ಹಾಜರಿದ್ದರು.
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)