ಬೆಂಗಳೂರು: ತಾಯಿ ಎದುರೇ ಯುವತಿಯ ಅತ್ಯಾಚಾರವೆಸಗಿದ ನಟ; ಆರೋಪ
ಬೆಂಗಳೂರು, ಮೇ 15: ಕಿರುಚಿತ್ರವೊಂದರ ನಟ, ನಿರ್ದೇಶಕ ಪ್ರಮೋದ್ ಕುಮಾರ್, ತಾಯಿಯ ಎದುರೇ ಯುವತಿಯ ಮೇಲೆ ಅತ್ಯಾಚಾರ ಎಸಗಿರುವ ಗಂಭೀರ ಆರೋಪ ಕೇಳಿಬಂದಿದೆ.
ವಿವೇಕನಗರದ ಅಶ್ವಿನಿ ಲೇಔಟ್ ನಿವಾಸಿ ಪಿ. ಪ್ರಮೋದ್ ಕುಮಾರ್ ಎಂಬಾತ 21 ವರ್ಷದ ಯುವತಿ ಮೇಲೆ ಅತ್ಯಾಚಾರವೆಸಗಿದ್ದಾನೆಂದು ಇಲ್ಲಿನ ವಿವೇಕನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ಏನಿದು ಪ್ರಕರಣ?: ಸಂತ್ರಸ್ತೆ ಹಾಗೂ ಆರೋಪಿ ಅಕ್ಕಪಕ್ಕದ ಮನೆಯವರಾಗಿದ್ದು ಕಳೆದ ಎರಡು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಮೇ 10ರಂದು ಹುಟ್ಟುಹಬ್ಬದ ಕಾರ್ಯಕ್ರಮ ಇದೆ ಎಂದು ಕೋರಮಂಗಲ 7ನೆ ಬ್ಲಾಕ್ನಲ್ಲಿರುವ ತನ್ನ ಕಚೇರಿಯಲ್ಲಿಯೇ ಪ್ರಮೋದ್ ಕುಮಾರ್, ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ.
ಸ್ವತಃ ಪ್ರಮೋದ್ ಕುಮಾರ್ ತಾಯಿ, ಅತ್ಯಾಚಾರದ ಕೃತ್ಯ ನೋಡಿದರೂ, ತಡೆಯುವ ಪ್ರಯತ್ನ ಮಾಡಿಲ್ಲ ಎಂದು ಸಂತ್ರಸ್ತೆ ಆರೋಪ ಮಾಡಿದ್ದು, ಈ ಸಂಬಂಧ ಪ್ರಮೋದ್ನನ್ನು ವಿವೇಕನಗರ ಪೊಲೀಸರು ವಶಕ್ಕೆ ಪಡೆದು, ಐಪಿಸಿ ಸೆಕ್ಷನ್ 376 ಅಡಿ ಮೊಕದ್ದಮೆ ದಾಖಲಿಸಿ, ಕ್ರಮ ಕೈಗೊಂಡಿದ್ದಾರೆ.