ಶಾಪಿಂಗ್ ಮಾಲ್ ಹೊರಗಡೆ ಗ್ರೆನೇಡ್ ಸ್ಫೋಟ: 6 ಮಂದಿಗೆ ಗಾಯ
ಗುವಾಹಟಿ,ಮೇ 15: ಬುಧವಾರ ಸಂಜೆ ಇಲ್ಲಿಯ ಶಾಪಿಂಗ್ ಮಾಲ್ವೊಂದರ ಹೊರಗೆ ಗ್ರೆನೇಡ್ ಸ್ಫೋಟಗೊಂಡು ಇಬ್ಬರು ಭದ್ರತಾ ಸಿಬ್ಬಂದಿಗಳು ಸೇರಿದಂತೆ ಕನಿಷ್ಠ 10 ಜನರು ಗಾಯಗೊಂಡಿದ್ದಾರೆ.
ಪ್ರದೇಶದಲ್ಲಿ ಮಾಮೂಲು ಗಸ್ತು ಕಾರ್ಯದಲ್ಲಿ ನಿರತರಾಗಿದ್ದ ಭದ್ರತಾ ಸಿಬ್ಬಂದಿಗಳನ್ನು ಗುರಿಯಾಗಿಸಿಕೊಂಡು ಗ್ರೆನೇಡ್ ಸ್ಫೋಟಿಸಿರುವಂತಿದೆ ಎಂದು ಐಜಿ ದೀಪಕ ಕುಮಾರ ತಿಳಿಸಿದರು.
ಯಾವುದೇ ಗುಂಪು ಸ್ಫೋಟದ ಹೊಣೆಯನ್ನು ಹೊತ್ತುಕೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ನಿಷೇಧಿತ ಉಲ್ಫಾ ದಾಲಿಯ ಹೊಣೆ ವಹಿಸಿಕೊಂಡಿದೆ ಎಂದು ಆಕಾಶವಾಣಿಯು ಹೇಳಿದೆ.
ಮುಖ್ಯಮಂತ್ರಿ ಸರಬಾನಂದ ಸೊನೊವಾಲ್ ಅವರು ದಾಳಿಯನ್ನು ಖಂಡಿಸಿದ್ದಾರೆ.
Next Story