varthabharthi

ರಾಷ್ಟ್ರೀಯ

ಅಮಿತ್ ಶಾ ರ್ಯಾಲಿಯಲ್ಲಿ ಹಿಂಸಾಚಾರ ವಿರೋಧಿಸಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ರ್ಯಾಲಿ

ವಾರ್ತಾ ಭಾರತಿ : 15 May, 2019

  ಕೋಲ್ಕೊತ್ತಾ, ಮೇ 15: ನಗರದಲ್ಲಿ ಮಂಗಳವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ರ್ಯಾಲಿ ಸಂದರ್ಭ ನಡೆದ ದಾಂಧಲೆ ವಿರೋಧಿಸಿ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಕೋಲ್ಕೊತ್ತಾದಲ್ಲಿ ಬುಧವಾರ 6 ಕಿ.ಮೀ. ಪ್ರತಿಭಟನಾ ರ್ಯಾಲಿ ನಡೆಸಿದರು.

 ನಗರದ ಹೃದಯ ಭಾಗವಾದ ಬೇಲಿಯಘಾಟದಿಂದ ಶ್ಯಾಮ್‌ಬಝಾರ್ ವರೆಗೆ ಬ್ಯಾನರ್ಜಿ ರ್ಯಾಲಿ ನಡೆಸಿದರು. ರ್ಯಾಲಿಯಲ್ಲಿ ಮಮತಾ ಬ್ಯಾನರ್ಜಿ ಅವರೊಂದಿಗೆ ಸಾವಿರಾರು ಬೆಂಬಲಿಗರು ಪಾಲ್ಗೊಂಡರು.

 ಕೋಲ್ಕೊತ್ತಾದಲ್ಲಿ ಬಿಜೆಪಿ ತೃಣಮೂಲ ಪಕ್ಷದ ನಡುವೆ ಘರ್ಷಣೆ ನಡೆದ ಬಳಿಕ ಮಮತಾ ಬ್ಯಾನರ್ಜಿ ಈ ರ್ಯಾಲಿ ನಡೆಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)