varthabharthi

ಕರಾವಳಿ

ಕೆ.ಎಸ್.ಎ ಶಿಕ್ಷಣ ಮಂಡಳಿ: 5ನೇ ತರಗತಿ ಮದ್ರಸ ಪಬ್ಲಿಕ್ ಪರೀಕ್ಷೆಯ ಫಲಿತಾಂಶ ಪ್ರಕಟ

ವಾರ್ತಾ ಭಾರತಿ : 15 May, 2019

ಮಂಗಳೂರು: ಕರ್ನಾಟಕ ಸಲಫಿ ಎಸೋಸಿಯೇಷನ್ ಮಂಗಳೂರು ಇದರ ಅಧೀನ ಸಂಸ್ಥೆ ಕೆ.ಎಸ್.ಎ ಶಿಕ್ಷಣ ಮಂಡಳಿಯು ಎಪ್ರಿಲ್ 2019 ರಲ್ಲಿ ನಡೆಸಿದ ಐದನೇ ತರಗತಿಯ ಮದ್ರಸಾ ಪಬ್ಲಿಕ್ ಪರೀಕ್ಷೆಯ ಫಲಿತಾಂಶವು ಪ್ರಕಟಗೊಂಡಿದೆ. 

ದಾರುತ್ತೌಹೀದ್ ಮದ್ರಸ, ಮಡಿಕೇರಿಯ ವಿದ್ಯಾರ್ಥಿನಿ ಸುನೈನಾ ಪ್ರಥಮ ರ್ಯಾಂಕನ್ನೂ, ಅಲ್ ಮನಾರ್ ಮದ್ರಸ, ಮುಕ್ಕಚ್ಚೇರಿ, ಉಳ್ಳಾಲದ ವಿದ್ಯಾರ್ಥಿನಿ ಸುಝಾನಾ ದ್ವಿತೀಯ ರ್ಯಾಂಕನ್ನೂ, ಸಲಫಿ ಮದ್ರಸ, ಸುಂಠಿಕೊಪ್ಪದ ವಿದ್ಯಾರ್ಥಿ ಉಬೈದ್ ಟಿ.ಯು ತೃತೀಯ ರ್ಯಾಂಕನ್ನೂ ಪಡೆದಿದ್ದಾರೆ.

ನಾಲ್ಕನೇ ರ್ಯಾಂಕನ್ನು ದಾರುಲ್ ಹುದಾ ಮದ್ರಸ, ಪುತ್ತೂರಿನ ವಿದ್ಯಾರ್ಥಿ ಖಲೀಲ್ ಮುಹಮ್ಮದ್ ಝನೂನ್ ಮತ್ತು ಅಲ್ ಹಿಕ್ಮ ಇಸ್ಲಾಮಿಕ್ ಮದ್ರಸ, ದೇರಳ ಕಟ್ಟೆಯ ವಿದ್ಯಾರ್ಥಿನಿ ಸುಹಾ ನಫೀಸಾ ಎಂಬ ಇಬ್ಬರು ಪಡೆದಿದ್ದಾರೆ.

ಐದನೇ ರ್ಯಾಂಕನ್ನು ಅಲ್ ಹಿಕ್ಮ ಇಸ್ಲಾಮಿಕ್ ಮದ್ರಸ, ದೇರಳ ಕಟ್ಟೆಯ ವಿದ್ಯಾರ್ಥಿನಿ ಹಿಫಾ ಸಬೀಬಾ ಪಡೆದಿರುತ್ತಾರೆ. ಆಯಾ ಮದ್ರಸಗಳಲ್ಲಿ ದಿನಾಂಕ ಮೇ 16ರಂದು ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ಕೆ.ಎಸ್.ಎ ಶಿಕ್ಷಣ ಮಂಡಳಿಯ ಅಧ್ಯಕ್ಷ ಡಾ. ಮುಹಮ್ಮದ್ ಹಫೀಝ್ ಸ್ವಲಾಹಿ ಮತ್ತು ಕಾರ್ಯದರ್ಶಿ ಹಸೈನಾರ್ ಸ್ವಲಾಹಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)