varthabharthi

ಕರ್ನಾಟಕ

ಹನೂರು: ಪಟ್ಟಣ ಪಂಚಾಯತ್ ಚುನಾವಣೆಗೆ 8 ನಾಮಪತ್ರ ಸಲ್ಲಿಕೆ

ವಾರ್ತಾ ಭಾರತಿ : 15 May, 2019

ಹನೂರು: ಪಟ್ಟಣ ಪಂಚಾಯತ್ ಚುನಾವಣೆಗೆ ಬುಧವಾರ ಕಾಂಗ್ರೆಸ್, ಬಿಜೆಪಿ ಪಕ್ಷಗಳಿಂದ ಒಟ್ಟು 8 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷದ 5 ಅಭ್ಯರ್ಥಿಗಳು ಹಾಗೂ ಬಿಜೆಪಿ ಪಕ್ಷದ 3 ಅಭ್ಯರ್ಥಿಗಳು ಒಟ್ಟು 8 ನಾಮಪತ್ರ ಸಲ್ಲಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಅಭ್ಯರ್ಥಿಯಾದ ಸೋಮಶೇಖರ್ 10 ನೇ ವಾರ್ಡ್ ಹಿಂದುಳಿದ ವರ್ಗ ಎ, ಹರೀಶ್‍ಕುಮಾರ್ 3 ನೇ ವಾರ್ಡ್ ಮತ್ತು ಮಾದೇಶ್ 8 ನೇ ವಾರ್ಡ್ ಸಾಮಾನ್ಯ, ರಾಜಮಣಿ 4 ನೇ ವಾರ್ಡ್ ಸಾಮಾನ್ಯ ಮಹಿಳೆ,  ಬಸವರಾಜು 13 ನೇ ವಾರ್ಡ್  ಪರಿಶಿಷ್ಟ ಜಾತಿ, ಹಾಗೂ ಬಿಜೆಪಿ ಪಕ್ಷದ ಅಭ್ಯರ್ಥಿಗಳಾದ ಕಾಂತರಾಜು 3 ನೇ ವಾರ್ಡ್ ಸಾಮಾನ್ಯ, ಪುಟ್ಟರಾಜು 11 ನೇ ವಾರ್ಡ್ ಪರಿಶಿಷ್ಟ ಜಾತಿ, ಶಿವಮ್ಮ 4 ನೇ ವಾರ್ಡ್‍ಗೆ ಸಾಮಾನ್ಯ ಮಹಿಳೆ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳಾಗಿದ್ದಾರೆ.
ಚುನಾವಣಾಧಿಕಾರಿಗಳಾಗಿ ಟಿ.ಆರ್.ಸ್ವಾಮಿ ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಕ್ಯಾತ ಕಾರ್ಯನಿರ್ವಹಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)