varthabharthi

ಕರ್ನಾಟಕ

​ತುಮಕೂರು: ತಂಬಾಕು ಕಾರ್ಯಾಚರಣೆ: 58,880 ರೂ. ದಂಡ ಸಂಗ್ರಹ

ವಾರ್ತಾ ಭಾರತಿ : 16 May, 2019

ತುಮಕೂರು,ಮೇ.15: ತಿಪಟೂರು ತಾಲ್ಲೂಕಿನಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರ ಹಾಗೂ ಅಂಗಡಿಗಳಲ್ಲಿ ನಾಮಫಲಕ ಪ್ರದರ್ಶಿಸದಿರುವವರ ವಿರುದ್ಧ, ತಂಬಾಕು ಉತ್ಪನ್ನಗಳನ್ನು ಜಾಹಿರಾತು ಮಾಡುವವರ ವಿರುದ್ಧ, ಶಾಲಾ ಆವರಣಗಳಲ್ಲಿ ತಂಬಾಕು ಉತ್ಪನ್ನಗಳ ವಹಿವಾಟು ನಡೆಸುತ್ತಿರುವವರ ವಿರುದ್ಧ ಸತತ 18 ದಿನಗಳ ಕಾರ್ಯಾ ಚರಣೆಯಲ್ಲಿ ಒಟ್ಟು 530 ಪ್ರಕರಣ ದಾಖಲಿಸಿ 58,880 ರೂ. ದಂಡ ಸಂಗ್ರಹಿಸಲಾಗಿದೆ ಎಂದು ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಜಿಲ್ಲಾ ಸಲಹೆಗಾರ ರವಿಪ್ರಕಾಶ ಎಂ.ಆರ್ ತಿಳಿಸಿದ್ದಾರೆ.

ತಿಪಟೂರು ತಾಲ್ಲೂಕನ್ನು ಕೋಟ್ಪಾ ಕಾಯ್ದೆಯ ಉನ್ನತ ಅನುಷ್ಟಾನ ತಾಲ್ಲೂಕೆಂದು ಘೋಷಿಸಬೇಕಾಗಿರುವ ಸಂಬಂಧ ಸಾರ್ವಜನಿಕರ ಸಹಕಾರ ಅತೀ ಮುಖ್ಯವಾಗಿದ್ದು, ತಿಪಟೂರಿನ ಜನತೆ ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ಎಲ್ಲರು ಕಾನೂನು ಪಾಲನೆ ಮಾಡುವುದರೊಂದಿಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿ, ಸಮಾಜ ಕಾರ್ಯಕರ್ತ ಪುಂಡಲೀಕ ಲಕಾಟಿ, ತಾಲೂಕು ಆರೋಗ್ಯಾಧಿಕಾರಿ ರವಿಕುಮಾರ್, ಶಂಕರಪ್ಪ, ಸೇರಿದಂತೆ ತಾಲೂಕಿನ ಸಹಾಯಕ ಸಿಬ್ಬಂದಿಗಳು ಹಾಜರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)