varthabharthi

ಕ್ರೀಡೆ

ಎರಡು ಪಂದ್ಯಗಳ ಹಾಕಿ ಸರಣಿ

ಆಸ್ಟ್ರೇಲಿಯ ವಿರುದ್ಧ ಭಾರತಕ್ಕೆ 0-4 ಸೋಲು

ವಾರ್ತಾ ಭಾರತಿ : 16 May, 2019

ಪರ್ತ್, ಮೇ 15: ಆಸ್ಟ್ರೇಲಿಯ ವಿರುದ್ಧ ಎರಡು ಪಂದ್ಯಗಳ ಹಾಕಿ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 0-4 ಅಂತರದಲ್ಲಿ ಸೋಲು ಅನುಭವಿಸಿದೆ.

ಪರ್ತ್ ಹಾಕಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬ್ಲಾಕ್ ಗೋವೆರ್ಸ್‌ ಮತ್ತು ಜೆರ್ಮಿ ಹಾಯ್‌ವರ್ಡ್ ಬಾರಿಸಿದ ತಲಾ 2 ಗೋಲುಗಳ ನೆರವಿನಲ್ಲಿ ಆಸ್ಟ್ರೇಲಿಯ ಗೆಲುವು ದಾಖಲಿಸಿತು.

ಹೊಸ ಕೋಚ್ ಗ್ರಹಾಂ ರೇಡ್ ಮಾರ್ಗದರ್ಶನದಲ್ಲಿ ಭಾರತದ ಆಡಿದ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿದೆ.

 ಆಸ್ಟ್ರೇಲಿಯಕ್ಕೆ 15ನೇ ನಿಮಿಷದಲ್ಲಿ ಪೆನಾಲ್ಟಿ ಅವಕಾಶ ದೊರೆಯಿತು. ಬ್ಲಾಕ್ ಗೊವೆರ್ಸ್‌ ಈ ಅವಕಾಶದಲ್ಲಿ ಗೋಲು ಜಮೆ ಮಾಡಿ ತಂಡಕ್ಕೆ 1-0 ಮುನ್ನಡೆಗೆ ನೆರವಾದರು.

 19ನೇ ನಿಮಿಷದಲ್ಲಿ ಬಿರೇಂದ್ರಾ ಲಕ್ರಾ ಗೋಲು ಗಳಿಸುವ ಯತ್ನ ನಡೆಸಿದರು. ಆದರೆ ಅವರ ಯತ್ನ ಫಲ ನೀಡಲಿಲ್ಲ. ಆಸ್ಟ್ರೇಲಿಯ 2ನೇ ಕ್ವಾರ್ಟರ್‌ನಲ್ಲಿ ಇನ್ನೊಂದು ಗೋಲು ಕಬಳಿಸಿತು. 20ನೇ ನಿಮಿಷದಲ್ಲಿ ಜೆರ್ಮಿ ಹಾಯ್‌ವರ್ಡ್ ಪೆನಾಲ್ಟಿ ಅವಕಾಶದಲ್ಲಿ ಗೋಲು ಜಮೆ ಮಾಡಿದರು. 24ನೇ ನಿಮಿಷದಲ್ಲಿ ಭಾರತಕ್ಕೆ ಮೂರನೇ ಬಾರಿ ಪೆನಾಲ್ಟಿ ಅವಕಾಶ ಸಿಕ್ಕಿತು. ಆದರೆ ಗೋಲು ಬರಲಿಲ್ಲ. 52ನೇ ನಿಮಿಷದಲ್ಲಿ ಭಾರತಕ್ಕೆ ಇನ್ನೊಂದು ಅವಕಾಶ ಸಿಕ್ಕಿದರೂ, ಗೋಲು ಬರಲಿಲ್ಲ. 60ನೇ ನಿಮಿಷದಲ್ಲಿ ಜೆರ್ಮಿ ಹಾಯ್‌ವರ್ಡ್ ಆಸ್ಟ್ರೇಲಿಯಕ್ಕೆ 3ನೇ ಗೋಲು ದೊರಕಿಸಿಕೊಟ್ಟರು. ಕೊನೆಯಲ್ಲಿ ಗೋವೆರ್ಸ್‌ ಗೋಲು ಬಾರಿಸಿದರು. ಇದರೊಂದಿಗೆ ಆಸ್ಟ್ರೇಲಿಯ 4-0 ಅಂತರದಲ್ಲಿ ಜಯ ದಾಖಲಿಸಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)