varthabharthi

ಕ್ರೀಡೆ

ಕಪಿಲ್‌ದೇವ್ ದಾಖಲೆ ಮುರಿದ ಇಮಾಮ್

ವಾರ್ತಾ ಭಾರತಿ : 16 May, 2019

ಬ್ರಿಸ್ಟೋಲ್, ಮೇ 15: ಇಂಗ್ಲೆಂಡ್ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ ಪಾಕ್ ಆರಂಭಿಕ ಆಟಗಾರ ಇಮಾಮ್‌ವುಲ್ ಹಕ್ ಏಕದಿನ ಇನಿಂಗ್ಸ್‌ನಲ್ಲಿ 150 ಹಾಗೂ ಅದಕ್ಕಿಂತ ಹೆಚ್ಚು ರನ್(151,131 ಎಸೆತ)ಗಳಿಸಿದ ಕಿರಿಯ ವಯಸ್ಸಿನ ಆಟಗಾರ ಎನಿಸಿಕೊಂಡಿದ್ದಾರೆ.

23 ವರ್ಷ, 153 ದಿನಗಳಲ್ಲಿ ಈ ಸಾಧನೆ ಮಾಡಿರುವ ಇಮಾಮ್, 1983ರಲ್ಲಿ ತನ್ನ 24ನೇ ವಯಸ್ಸಿನಲ್ಲಿ ಝಿಂಬಾಬ್ವೆ ವಿರುದ್ಧ ವಿಶ್ವಕಪ್ ಪಂದ್ಯದಲ್ಲಿ ಔಟಾಗದೆ 175 ರನ್ ಗಳಿಸಿದ್ದ ಭಾರತದ ದಂತಕತೆ ಕಪಿಲ್‌ದೇವ್‌ರ ದಾಖಲೆಯನ್ನು ಹಿಂದಿಕ್ಕಿದರು.

ಇಂಗ್ಲೆಂಡ್ ವಿರುದ್ಧ 151 ರನ್ ಗಳಿಸಿದ ಇಮಾಮ್ ಕಳೆದ ವರ್ಷ ಬುಲಾವವೊದಲ್ಲಿ ಝಿಂಬಾಬ್ವೆ ವಿರುದ್ಧ ಗಳಿಸಿದ್ದ ತನ್ನ ವೈಯಕ್ತಿಕ ಏಕದಿನ ಸ್ಕೋರ್(128)ದಾಖಲೆಯನ್ನು ಉತ್ತಮಪಡಿಸಿಕೊಂಡರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)