varthabharthi

ರಾಷ್ಟ್ರೀಯ

ನೇಪಾಲದಲ್ಲಿ ಭಾರತದ ಇಬ್ಬರು ಪರ್ವಾತಾರೋಹಿಗಳ ಸಾವು

ವಾರ್ತಾ ಭಾರತಿ : 16 May, 2019

ಕುಂತಾಲ್ ಕನ್ರಾರ್

ಕಠ್ಮಂಡು, ಮೇ 16: ವಿಶ್ವದ ಮೂರನೇ ಅತಿ ದೊಡ್ಡ ಶಿಖರ ಮೌಂಟ್ ಕಾಂಚನ್ ಜುಂಗಾದಲ್ಲಿ ಪರ್ವಾತಾರೋಹಣಕ್ಕೆ ತೆರಳಿದ್ದ ಭಾರತದ ಇಬ್ಬರು ಪರ್ವತಾರೋಹಿಗಳು ಸಾವನ್ನಪ್ಪಿರುವ ಘಟನೆ ಬುಧವಾರ ತಡರಾತ್ರಿ ಸಂಭವಿಸಿದೆ. ಪಶ್ಚಿಮ ಬಂಗಾಳದ ಬಿಪ್ಲಬ್ ಬೈದ್ಯ (48) ಮತ್ತು ಕುಂತಾಲ್ ಕನ್ರಾರ್ (46)   ಎಂಬವರೇ ಮೃತಪಟ್ಟ ಪರ್ವತಾರೋಹಿಗಳಾಗಿದ್ದಾರೆ.

ಕಾಂಚನ್ ಜುಂಗಾ ಶಿಖರದಲ್ಲಿ  8,000 ಮೀಟರ್ (26,246) ಎತ್ತರಕ್ಕೆ ಏರಿದ್ದ ಬಿಪ್ಲಬ್ ಬೈದ್ಯ ಮತ್ತು ಕುಂತಾಲ್ ಕನ್ರಾರ್ ಅಸೌಖ್ಯದಿಂದ  ಮತ್ತೆ ಮುಂದಕ್ಕೆ ಶಿಖರ ಏರಲು ಸಾಧ್ಯವಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ವಿಶ್ವದ ಬೇರೆ ಬೇರೆ ದೇಶಗಳ   ನೂರಾರು ಪರ್ವತಾರೋಹಿಗಳು ಪರ್ವತಾರೋಹಣದಲ್ಲಿ ನಿರತರಾಗಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)